ಗಿಲ್, ಪೂಜಾರ್ ಶತಕ.. ಬಾಂಗ್ಲಾಗೆ 513 ರನ್ ಟಾರ್ಗೆಟ್

273

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಅಬ್ಬರಿಸಿದೆ. 2ನೇ ಇನ್ನಿಂಗ್ಸ್ ನಲ್ಲಿ ಚೇತೇಶ್ವರ್ ಪೂಜಾರ್ ಹಾಗೂ ಶುಭನಂ ಗಿಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಗಿಲ್ 110 ರನ್ ಬಾರಿಸಿ ಔಟ್ ಆದರೆ, ಪೂಜಾರ್ ಅಜೇಯ 102 ರನ್ ಗಳಿಸಿದರು. ಇದರಿಂದಾಗಿ ಭಾರತ 2 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತು.

ಕೊಹ್ಲಿ ಅಜೇಯ 19, ನಾಯಕ ಕೆ.ಎಲ್ ರಾಹುಲ್ 23 ರನ್ ಗಳಿಸಿ ಔಟ್ ಆದರು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 404 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟ್ ಮಾಡಿದ ಬಾಂಗ್ಲಾ ಪಡೆ 150 ರನ್ ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಭಾರತ 254 ರನ್ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್ ನಲ್ಲಿ 258 ರನ್ ಗಳಿಸಿ 513 ರನ್ ಟಾರ್ಗೆಟ್ ನೀಡಿದೆ.

2ನೇ ಇನ್ನಿಂಗ್ಸ್ ಶುರು ಮಾಡಿರುವ ಬಾಂಗ್ಲಾ 42 ರನ್ ಗಳಿಸಿದೆ. ನಜ್ಮುಲ್ ಹಸನ್ 25, ಝಾಕಿರ್ ಹಸನ್ 17 ರನ್ ಗಳಿಸಿ ಆಡುತ್ತಿದ್ದಾರೆ. 3ನೇ ದಿನದ ಆಟಕ್ಕೆ ತೆರೆ ಬಿದ್ದಿದ್ದು, 471 ರನ್ ಗಳಿಸಿ ಇನ್ನು 2 ದಿನ ಸಮಯ ಇದೆ. ಭಾರತದ ಬೌಲಿಂಗ್ ಹಾಗೂ ಬಾಂಗ್ಲಾ ಬ್ಯಾಟ್ಸಮನ್ ಗಳ ಮೇಲೆ ಸೋಲು ಗೆಲುವು ನಿರ್ಧಾರವಾಗಲಿದೆ.

ಇನ್ನು ಚೇತೇಶ್ವರ್ ಪೂಜಾರ್ ಟೆಸ್ಟ್ ನಲ್ಲಿ 19ನೇ ಶತಕ ದಾಖಲಿಸಿದರು. ಮೊದಲ ಇನ್ನಿಂಗ್ಸ್ 90 ರನ್ ಗಳಿಗೆ ಔಟ್ ಆಗುವ ಮೂಲಕ ಶತಕ ವಂಚಿತರಾಗಿದ್ದರು. ಆದರೆ, 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಗಳಿಸಿ 19 ಬಾರಿ 100 ರನ್ ಬಾರಿಸಿದರು. ಇವರಿಗೆ ಸಾಥ್ ನೀಡಿದ ಶುಭನಂ ಗಿಲ್ ಟೆಸ್ಟ್ ಕರಿಯರ್ ನಲ್ಲಿ ಮೊದಲ ಶತಕ ಸಿಡಿಸಿದ. ಇದಕ್ಕಾಗಿ 11 ಪಂದ್ಯಗಳನ್ನು ತೆಗೆದುಕೊಂಡ. ಇದುವರೆಗೂ 4 ಅರ್ಧಶತಕ ಗಳಿಸಿದ್ದಾನೆ.

ಫೋಟೋ ಕೃಪೆ: ಬಿಸಿಸಿಐ ಟ್ವೀಟರ್




Leave a Reply

Your email address will not be published. Required fields are marked *

error: Content is protected !!