188 ರನ್ ಗಳಿಂದ ಗೆದ್ದ ಭಾರತ

195

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 188 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಬಾಂಗ್ಲಾ ಪಡೆ 513 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. 324 ರನ್ ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು ಸೋತಿದೆ.

4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತ್ತು. 5 ದಿನದ ಮೊದಲ ಅವಧಿಯಲ್ಲಿಯೇ 4 ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು. 40 ರನ್ ಗಳೊಂದಿಗೆ ಆಡುತ್ತಿದ್ದ ನಾಯಕ ಶಕೀಬ್ ಅಲ್ ಹಸನ್ 84 ರನ್ ಗಳಿಗೆ ಔಟ್ ಆದರು. ಇವರ ಹೊರತು ಉಳಿದ ಆಟಗಾರರನ್ನು ಕ್ರಿಸ್ ನಲ್ಲಿ ನಿಲ್ಲಲು ಭಾರತದ ಬೌಲರ್ ಗಳು ಬಿಡಲಿಲ್ಲ.

ಅಕ್ಷರ್ ಪಟೇಲ್ 4 ವಿಕೆಟ್ ಪಡೆದರೆ ಕುಲದೀಪ್ ಯಾದವ್ 3 ವಿಕೆಟ್ ಪಡೆದರು. ಸಿರಾಜ್, ಉಮೇಶ್ ಯಾದವ್, ಅಶ್ವಿನ್ ತಲಾ 1 ವಿಕೆಟ್ ಪಡೆದರು. ಗೆಲುವಿನೊಂದಿಗೆ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಇನ್ನು ಬೌಲರ್ ಕುಲದೀಪ್ ಯಾದವ್ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು, 40 ರನ್ ಗಳಿಸಿದರೆ 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದರು. ಇದರೊಂದಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಹೊರ ಹೊಮ್ಮಿದರು.

ಫೋಟೋ ಕೃಪೆ: ಬಿಸಿಸಿಐ ಟ್ವೀಟರ್




Leave a Reply

Your email address will not be published. Required fields are marked *

error: Content is protected !!