ದ್ವಿಶತಕ ಬಾರಿಸಿ ಹೊಸ ಸಾಧನೆ ಮಾಡಿದ ಶುಭ್ಮನ್ ಗಿಲ್

302

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಹೈದ್ರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಆಟಗಾರ ಶುಭ್ಮನ್ ಗಿಲ್ ಭರ್ಜರಿ ಧ್ವಿಶತಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಒಂದು ಕಡೆ ವಿಕೆಟ್ ಗಳು ಉರುಳುತ್ತಿದ್ದರೆ ಇನ್ನೊಂದು ಕಡೆ ಗಟ್ಟಿಯಾಗಿ ನಿಂತ ಗಿಲ್ 9 ಸಿಕ್ಸ್, 19 ಫೋರ್ ಗಳೊಂದಿಗೆ 149 ಬೌಲ್ ಗಳಲ್ಲಿ ಬರೋಬ್ಬರಿ 208 ರನ್ ಗಳಿಸಿ ಔಟ್ ಆದರು. ಇದರೊಂದಿಗೆ ಏಕದಿನ ಪಂದ್ಯದಲ್ಲಿ 200ರ ಕ್ಲಬ್ ಸೇರಿದರು.

2010 ಸಚಿನ್ ತಂಡೂಲ್ಕರ್ ಸೌಥ್ ಆಫ್ರಿಕಾ ವಿರುದ್ಧ 200 ರನ್ ಗಳಿಸುವ ಮೂಲಕ ವಿಶ್ವದ ಮೊದಲ ಕ್ರಿಕೆಟ್ ಆಟಗಾರ ಏಕದಿನ ಪಂದ್ಯದಲ್ಲಿ 200 ರನ್ ಗಳಿಸಿದ ಸಾಧನೆ ಮಾಡಿದರು. 2011ರಲ್ಲಿ ವಿರೇಂದ್ರ ಸೆಹ್ವಾಗ್ ವೆಸ್ಟ್ ಇಂಡಿಸ್ ವಿರುದ್ಧ 219 ರನ್ ಗಳಿಸಿ ಹೊಸ ದಾಖಲೆ ಬರೆದರು. 2013ರಲ್ಲಿ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 208, 214ರಲ್ಲಿ ಶ್ರೀಲಂಕಾ ವಿರುದ್ಧ 264, 2017ರಲ್ಲಿ ಶ್ರೀಲಂಕಾ ವಿರುದ್ಧ 208 ರನ್ ಗಳಿಸುವ ಮೂಲಕ ಶರ್ಮಾ ಮೂರು ಬಾರಿ ದ್ವಿಶತಕದ ಸಾಧನೆ ಮಾಡಿದ್ದಾರೆ. ಇವರ ಸಾಲಿಗೆ ಗಿಲ್ ಸೇರಿದರು.

ನಾಯಕ ಶರ್ಮಾ 34, ಸೂರ್ಯಕುಮಾರ್ ಯಾದವ್ 31, ಪಾಂಡ್ಯೆ 28 ರನ್ ಗಳಿಸಿದರು. ಅಂತಿಮವಾಗಿ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿ ದೊಡ್ಡ ಗುರಿಯನ್ನು ನ್ಯೂಜಿಲೆಂಡ್ ಗೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!