ಗಿಲ್-ರೋಹಿತ್ ಶತಕದ ಆಟ

174

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂದೋರ್: ನ್ಯೂಜಿಲೆಂಡ್ ವಿರುದ್ಧ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಹಿಂದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಶುಭಗ್ಮನ್ ಗಿಲ್ ಶತಕದ ಸಾಧನೆ ಮಾಡಿದ್ದಾರೆ. 9 ವಿಕೆಟ್ ನಷ್ಟಕ್ಕೆ 385 ರನ್ ಗಳ ಬೃಹತ್ ಸ್ಕೋರ್ ಪೇರಿಸಿದೆ.

ರೋಹಿತ್ ಶರ್ಮಾ 101, ಶುಭಗ್ಮನ್ ಗಿಲ್ 112, ಹಾರ್ದಿಕ್ ಪಾಂಡ್ಯ 54 ರನ್ ಗಳ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಕೊಹ್ಲಿ 36 ರನ್ ಗಳಿಸಿದರೆ ಉಳಿದವರು ಎರಡಂಕಿ ದಾಟಲಿಲ್ಲ. ರೋಹಿತ್ ಶರ್ಮಾ ತಮ್ಮ 30ನೇ ಏಕದಿನ ಶತಕ ಸಿಡಿಸಿದರು. ಗಿಲ್ 4ನೇ ಶತಕ ಸಿಡಿಸಿದರು.

212 ರನ್ ಗಳ ಜೊತೆಯಾಟ ಆಡಿದ ಈ ಓಪನರ್ ಜೋಡಿ ಇಬ್ಬರು ಶತಕ ಸಿಡಿಸಿದ 5ನೇ ಆಟಗಾರರಾದರು. ಇನ್ನು ಶುಭಗ್ಮನ್ ಗಿಲ್ 3 ಪಂದ್ಯದಲ್ಲಿ ಗರಿಷ್ಟ ಸ್ಕೋರ್ ಗಳಿಸಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ರೆಕಾರ್ಡ್ ಮುರಿದರು. ನ್ಯೂಜಿಲೆಂಡ್ ಪರ ಡುಫ್ಲೆ 3 ಹಾಗೂ ಟಿಕ್ನರ್ 3 ವಿಕೆಟ್ ಪಡೆದು ಮಿಂಚಿದರು. ಮೆಕಲ್ 1 ವಿಕೆಟ್ ಪಡೆದ.




Leave a Reply

Your email address will not be published. Required fields are marked *

error: Content is protected !!