219 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್

204

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಭಾರತ 219 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಕಿವೀಸ್ ಪಡೆಗೆ ಸಾಧಾರಣ ಗುರಿ ನೀಡಿದೆ.

ವಾಸಿಂಗ್ಟನ್ ಸುಂದರ್ 51 ಹಾಗೂ ಶ್ರೇಯಸ್ ಅಯ್ಯರ್ 49 ರನ್ ಗಳ ಹೊರತಾಗಿ ಉಳಿದ ಆಟಗಾರರಿಂದ ದೊಡ್ಡ ಸ್ಕೋರ್ ಬರಲಿಲ್ಲ. ಕೇನ್ ವಿಲಿಯಮ್ಸನ್ ಟೀಂ ಬೌಲರ್ ಗಳ ಎದುರು ಧವನ್ ಪಡೆ ಮಂಕಾಯಿತು. ನಾಯಕ ಧವನ್ 28, ಗಿಲ್ 13, ಪಂತ್ 10, ಟಿ-20 ಸರದಿಯಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ 6, ದೀಪಕ್ ಹೂಡಾ 12, ಚಹರ್ 12, ಚಹಲ್ 8 ಹಾಗೂ ಅರ್ಸದೀಪ್ ಸಿಂಗ್ 9 ರನ್ ಗಳಿಸಿ ಔಟ್ ಆದರು.

ನ್ಯೂಜಿಲೆಂಡ್ ಪರ ಮಿಲನ್ ಹಾಗೂ ಮಿಚೆಲ್ ತಲಾ‌ 3 ವಿಕೆಟ್ ಪಡೆದು ಮಿಂಚಿದರು. ಸೌಥಿ 2, ಫರ್ಗುಸನ್ 1, ಸ್ಟನ್ನರ್ 1 ವಿಕೆಟ್ ಪಡೆದರು. ಮೊದಲ ಪಂದ್ಯ ನ್ಯೂಜಿಲೆಂಡ್ ಗೆದ್ದರೆ 2ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಕೊನೆಯ ಪಂದ್ಯ ಏನಾಗುತ್ತೆ ಅನ್ನೋ ಕುತೂಹಲವಿದೆ.

ಫೋಟೋ: ಬಿಸಿಸಿಐ ಟ್ವಿಟ್ಟರ್




Leave a Reply

Your email address will not be published. Required fields are marked *

error: Content is protected !!