ಭಾರತಕ್ಕೆ ಟಿ-20 ಸರಣಿ

153

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ-20 ಪಂದ್ಯ ಟೈ ಆಗಿದ್ದು, ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿಯನ್ನು ವಶ ಪಡಿಸಿಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಯಿತು. 2ನೇ ಪಂದ್ಯ ಭಾರತ ಜಯಸಿತು. 3ನೇ ಪಂದ್ಯ ಟೈ ಆಯಿತು.

ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕಾನ್ವೆ 59, ಫಿಲ್ಪಸ್ 54 ರನ್ ಗಳ ಆಟದಿಂದಾಗಿ 160 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಸಿರಾಜ್ ಹಾಗೂ ಅರ್ಸದೀಪ್ ಸಿಂಗ್ ಕಮಾಲ್ ಮಾಡಿ ತಲಾ 4 ವಿಕೆಟ್ ಪಡೆದರು. ಹರ್ಸಲ್ ಪಟೇಲ್ 1 ವಿಕೆಟ್ ಪಡೆದ.

ನಂತರ ಭಾರತ ಬ್ಯಾಟಿಂಗ್ ಶುರು ಮಾಡಬೇಕು ಎನ್ನುವಷ್ಟರಲ್ಲಿ ಮಳೆಯ ಆಟ ಶುರುವಾಯಿತು. ಹೀಗಾಗಿ ಡಿಕ್ವರ್ತ್ ಲ್ಯೂಯಿಸ್ ಪ್ರಕಾರ 9 ಓವರ್ 76 ರನ್ ಟಾರ್ಗೆಟ್ ನೀಡಲಾಯಿತು. ಆದರೆ, ಭಾರತ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಯಿತು.

ಇಶಾನ್ ಕಿಶಾನ್ 10, ಪಂತ್ 11, ಸೂರ್ಯಕುಮಾರ್ ಯಾದವ್ 13 ರನ್ ಗಳಿಸಿ ಔಟ್ ಆದರು. ಶ್ರೇಯಸ್ ಅಯ್ಯರ್ ಡಕೌಟ್ ಆಗಿ ನಿರಾಸೆ ಮೂಡಿಸಿದ. ಪಾಂಡೆ ಅಜೇಯ 30, ಹೂಡಾ ಅಜೇಯ 9 ರನ್ ಗಳಿಸಿದರು. 4 ಓವರ್ ಗಳಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದ ಸಿರಾಜ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಸೂರ್ಯಕುಮಾರ್ ಯಾದವ್ ಪ್ಲೇಯರ್ ಆಫ್ ದಿ ಸಿರೀಸ್ ಆದರು.




Leave a Reply

Your email address will not be published. Required fields are marked *

error: Content is protected !!