ಮೋದಿಯಿಂದ ಪ್ರಚೋದನೆ ಹೇಳಿಕೆ ನೀಡಿ ಸಮಾಜ ಒಡೆಯುವ ಕೆಲಸ: ಖರ್ಗೆ

112

ಪ್ರಜಾಸ್ತ್ರ ಸುದ್ದಿ

ಮುಂಬೈ: ಚುನಾವಣಾ ಭಾಷಣಗಳಲ್ಲಿ ಪ್ರಧಾನಿ ಮೋದಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದರು.

ಇಂಡಿಯಾ ಮೈತ್ರಿಕೂಟದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದ ಯಾವುದೇ ಪ್ರಧಾನಿ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ಆದರೆ ಮೋದಿ ಪದೆಪದೆ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

ಶಿವಸೇನೆಯ ಉದ್ಧವ್ ಠಾಕ್ರೆ ಮಾತನಾಡಿ, ಮೋದಿಯವರು ನಮ್ಮನ್ನು ನಕಲಿ ಶಿವಸೇನೆ ಎನ್ನುತ್ತಾರೆ. ನಾಳೆ ಆರ್ ಎಸ್ಎಸ್ ಅನ್ನು ನಕಲಿ ಸಂಘ ಎಂದು ಕರೆಯಬಹದು. ಜನರ ಸಮಸ್ಯೆಯನ್ನು ಬೇರೆ ಕಡೆ ಸೆಳೆಯಲು ಪಾಕಿಸ್ತಾನದ ಧ್ವಜದ ವಿಷಯ ತರುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು.

ಈ ವೇಳೆ ಎನ್ ಸಿಪಿ ಶರದ್ ಪವಾರ್ ಮಾತನಾಡಿ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜಿಎಸ್ ಟಿ ಸರಳೀಕರಣಗೊಳಿಸಲಾಗುವುದು. ಏಕದರ ಜಿಎಸ್ ಟಿ ತರಲಾಗುವುದು ಅಂತಾ ಹೇಳಿದರು.
Leave a Reply

Your email address will not be published. Required fields are marked *

error: Content is protected !!