ಸೆಪ್ಟೆಂಬರ್ ವರೆಗೂ ಲಾಕ್ ಡೌನ್ ಇರುತ್ತಾ? ಶಾಕ್ ಕೊಟ್ತು ಅಮೆರಿಕ ವರದಿ!

368

ಕರೋನಾ ಮಹಾಮಾರಿಯಿಂದ ಇಡೀ ದೇಶದ ಜನತೆ ಕಂಗಾಲಾಗಿದ್ದಾರೆ. ಆದ್ರೆ, ಅನೇಕರು ಇದನ್ನ ತುಂಬಾ ಲಘುವಾಗಿ ಪರಿಗಣಿಸಿದ ಪರಿಣಾಮ ಮುಂದಿನ ದಿನಗಳಲ್ಲಿ ದೇಶದ ಜನತೆ ಬಹುದೊಡ್ಡ ಗಂಡಾಂತರ ಎದುರಿಸಬೇಕಾಗ್ತಿದೆ ಅನ್ನೋ ವರದಿಯೊಂದು ಬಂದಿದೆ. ಲಾಕ್ ಡೌನ್ ಫೇಲ್ ಆದಷ್ಟು ಜನರ ಬದುಕು ಸಂಪೂರ್ಣ ತತ್ತರಿಸಿ ಹೋಗಲಿದೆಯಂತೆ.

ಜನಸಂಖ್ಯೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಕರೋನಾ ವಿರುದ್ಧ ಹೋರಾಡ್ತಿರುವ ರೀತಿಗೆ ಇಡೀ ವಿಶ್ವವೇ ದಂಗಾಗಿತ್ತು. ಆದ್ರೆ, ಇದೀಗ ಸೋಂಕಿತರ ಸಂಖ್ಯೆ 3 ಸಾವಿರ ದಾಟಿದೆ. ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದೆ. ಸಾವಿನ ಸಂಖ್ಯೆ ಏರಿಕೆಯಾಗ್ತಿದೆ. ಮೊದಲಿಗಿಂತ ಅತಿವೇಗವಾಗಿ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಏರುತ್ತಿದೆ. ಇದನ್ನ ನೋಡ್ತಿದ್ರೆ ಖಂಡಿತ ಭಾರತ ಬಹುದೊಡ್ಡ ಗಂಡಾಂತರ ಎದುರಿಸಲಿದೆ ಅನ್ನೋ ಮುನ್ಸೂಚನೆ ಸಿಕ್ತಿದೆ.

ಲಾಕ್ ಡೌನ್ ಮುಗಿಯಲು ಇನ್ನೂ 9 ದಿನಗಳು ಬಾಕಿ ಉಳಿದಿವೆ. ಅಂದ್ರೆ ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯಲಿದೆ. ಆದ್ರೆ, ಮತ್ತೆ ಮೊದಲಿನಂತೆ ಹೊರ ಬಂದು ಜೀವನ ಮಾಡಬಹುದು ಅನ್ನೋದು ಕಷ್ಟಸಾಧ್ಯ. ಯಾಕಂದ್ರೆ, ಅಮೆರಿಕದ ವರದಿಯೊಂದು ಎಲ್ಲರನ್ನ ಬೆಚ್ಚಿಬೀಳಿಸುವಂತಿದೆ. ಅಮೆರಿಕ ಮೂಲದ ಬಿಜಿಸಿ(ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್) ವರದಿ ಪ್ರಕಾರ ಭಾರತದಲ್ಲಿ ಕರೋನಾ ನಿರ್ಬಂಧ ಸುದೀರ್ಘ ಅವಧಿಯವರೆಗೂ ಮುಂದುವರೆಯಲಿದೆ. ಬಾಹ್ಯ ಹಾಗೂ ಆಂತರಿಕವಾಗಿ ಸಂಗ್ರಹಿಸಿದ ಡೇಟಾ ಆಧಾರದ ಮೇಲೆ, ಭಾರತದಲ್ಲಿ ಕರೋನಾ ಪರಿಸ್ಥಿತಿ ಸಧ್ಯಕ್ಕೆ ಕಂಟ್ರೋಲ್ ಗೆ ಬರುವುದು ಡೌಟ್.

ಭಾರತದಲ್ಲಿ ಕರೋನಾ ಲಾಕ್ ಡೌನ್ ನಿರ್ಬಂಧಗಳನ್ನ ಜೂನ್ 4ನೇ ವಾರ ಮತ್ತು ಸೆಪ್ಟೆಂಬರ್ 2ನೇ ವಾರದ ನಡುವೆ ತೆಗೆದು ಹಾಕುವ ಸಾಧ್ಯತೆಯಿದೆ ಅನ್ನೋದು ವರದಿಯಲ್ಲಿ ತಿಳಿಸಿದೆ. ಹೀಗಾಗಿ ಕಡಿಮೆ ಮತ್ತು ದೀರ್ಘ ಕಾಲದ ಲಾಕ್ ಡೌನ್ ಬಿಜಿಸಿ ಪಟ್ಟಿ ಮಾಡಿದೆ. ಈ ವರದಿ ಎಷ್ಟರ ಮಟ್ಟಿಗೆ ನಿಜವಾಗುತ್ತೆ ಅನ್ನೋದು ಗೊತ್ತಿಲ್ಲ. ಜನರು ಸ್ವ ಗೃಹಬಂಧನವಾಗುವ ತನಕ ಕರೋನಾ ಹತೋಟಿಗೆ ತುರುವುದು ದೂರದ ಮಾತು. ಒಂದು ವೇಳೆ ಬಿಜಿಸಿ ವರದಿ ನಿಜವಾದ್ರೆ ಭಾರತದ ಜನತೆ ಅಕ್ಷರಶಃ ಬೀದಿ ಹೆಣವಾಗ್ತಾರೆ. ಕರೋನಾಗೆ ಅಲ್ಲ. ಅನ್ನ ನೀರು ಸಿಗದೆ!




Leave a Reply

Your email address will not be published. Required fields are marked *

error: Content is protected !!