ಜಡೇಜಾ ಮ್ಯಾಜಿಕ್: 5ನೇ ಬಾರಿಗೆ ಸಿಎಸ್ಕೆ ಚಾಂಪಿಯನ್

239

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಮಳೆಯಿಂದ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಟೆನ್ಷನ್ ನೀಡಿದ ಐಪಿಎಲ್ 2023 ಫೈನಲ್ ಪಂದ್ಯ ಅತ್ಯಂತ ರೋಚಕತೆಯಿಂದ ಕೊನೆಗೊಂಡಿದೆ. ಭಾನುವಾರ ರಾತ್ರಿ ಮಳೆ ಬಂದು ಕಾಯ್ದಿರಿಸಿದ ದಿನವಾದ ಸೋಮವಾರ ಸಂಜೆ ಪಂದ್ಯ ಶುರುವಾಯಿತು.

ಸೋಮವಾರ ಸಹ ಮಳೆ ಸುರಿಯಲು ಪ್ರಾರಂಭಿಸಿತು. ಹೀಗಾಗಿ ಚೆನ್ನೈ ಹಾಗೂ ಗುಜರಾತ್ ಟೈಟನ್ಸ್ ತಂಡದ ಅಭಿಮಾನಿಗಳ ಟೆನ್ಷನ್ ಮತ್ತಷ್ಟು ಹೆಚ್ಚಾಯಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಧೋನಿ ಲೆಕ್ಕಾಚಾರವನ್ನು ಹಾರ್ದಿಕ್ ಪಾಂಡ್ಯೆ ಟೀಂ ಉಲ್ಟಾ ಮಾಡಿತು. ಸುದರ್ಶನ್ 96, ವೃದ್ಧಮಾನ್ ಶಾ 54, ಗಿಲ್ 39 ರನ್ ಗಳ ಕಾಣಿಕೆಯಿಂದ ಭರ್ಜರಿ 214 ರನ್ ಗಳಿಸಿತು. ಸಿಎಸ್ಕೆ ಪರ ಮ್ಯಾಥೀಶ್ 2, ಚಹರ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.

ಚೆನ್ನೈ ಅಂಗಳಕ್ಕೆ ಇಳಿದು 4 ಬೌಲ್ ಎದುರಿಸುವಷ್ಟರಲ್ಲಿ ಮಳೆ ಮತ್ತೆ ಕಾಣಸಿಕೊಂಡಿತು. ಆಗ ಎಲ್ಲರ ಎದೆಬಡಿತ ಅಕ್ಷರಶಃ ಜೋರಾಗಿತ್ತು. ವರುಣದೇವ ತನ್ನ ಆಟ ಮುಂದುವರೆಸಿದ ಪರಿಣಾಮ ಕ್ರಿಕೆಟ್ ಆಟ ನಿಂತಿತು. ಕೊನೆಗೆ ಮಳೆ ನಿಂತಿತು. ಆಗ 15 ಓವರ್ 171 ಗುರಿ ನೀಡಲಾಯಿತು. ಗಾಯಕ್ವಾಡ್ 26, ಕಾನ್ವೆ 47 ರನ್ ಗಳಿಸಿದರು. ಶಿವಂ ದುಬೆ ಅಜೇಯ 32, ರಹನಾಎ 27, ರಾಯ್ಡು 19 ಹಾಗೂ ಕೊನೆಯಲ್ಲಿ ಮ್ಯಾಜಿಕ್ ಮಾಡಿದ ಜಡೇಜ್ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಜಿಟಿ ಪರ ಮೋಹಿತ್ ಶರ್ಮಾ 3, ನೂರ್ ಅಹ್ಮದ್ 2 ವಿಕೆಟ್ ಪಡೆದರು. ಚಾಂಪಿಯನ್ ತಂಡ ಸಿಎಸ್ಕೆಗೆ 20 ಕೋಟಿ, ರನ್ನರ್ ಅಪ್ ಜಿಟಿ ತಂಡಕ್ಕೆ 12.5 ಕೋಟಿ ನೀಡಲಾಯಿತು. ಶುಭಮನ್ ಗಿಲ್- ಆರೆಂಜ್ ಕ್ಯಾಪ್(17 ಪಂದ್ಯ 890 ರನ್), ಮೊಹಮ್ಮದ್ ಶೆಮಿ-ಪರ್ಪಲ್ ಕ್ಯಾಪ್(17 ಪಂದ್ಯ 28 ವಿಕೆಟ್)




Leave a Reply

Your email address will not be published. Required fields are marked *

error: Content is protected !!