ಮುಂಬೈ ಗೆಲುವು: ಫೈನಲ್ ಗೆ ಸಿಎಸ್ಕೆ ಎದುರಾಳಿ ಯಾರು?

185

ಪ್ರಜಾಸ್ತ್ರ ಕ್ರೀಡಾ ಸದ್ದಿ

ಬುಧವಾರ ರಾತ್ರಿ ನಡೆದ ಫ್ಲೇ ಆಫ್ ನ 2ನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಮುಂಬೈ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ ಪಂದ್ಯಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಈ ಸ್ಕೋರ್ ಬೆನ್ನಹತ್ತಿದ ಕೃನಾಲ್ ಪಾಂಡ್ಯ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ 101 ರನ್ ಗಳಿಗೆ ಆಲೌಟ್ ಆಗಿ ಫೈನಲ್ ಕನಸು ನುಚ್ಚು ನೂರಾಯಿತು.

ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ಎದುರು ಸೋತಿರುವ ಗುಜರಾತ್ ಟೈಟನ್ಸ್ ನಡುವೆ ಇನ್ನೊಂದು ಪಂದ್ಯ ನಡೆಯಲಿದೆ. ಇದರಲ್ಲಿ ಗೆಲುವು ಸಾಧಿಸಿದವರು ಚೆನ್ನೈ ತಂಡದೊಂದಿಗೆ ಸೆಣಸಾಟ ನಡೆಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!