ಮಾ.31ರಿಂದ ಐಪಿಎಲ್.. ಮೊದಲ ಪಂದ್ಯ ಯಾರ ನಡುವೆ?

161

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚುಟುಕು ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್ 16ನೇ ಆವೃತ್ತಿ ಮಾರ್ಚ್ 31ರಿಂದ ಶುರುವಾಗಲಿದೆ. ಈ ಮೂಲಕ ಒಂದೂವರೆ ತಿಂಗಳ ಕಾಲ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ ಶುರು. ಅಹಮಾದಾಬದ್ ನಲ್ಲಿರುವ ಸರ್ದಾರ್ ವಲ್ಲಾಭಾಯ್ ಪಟೇಲ್ ಸ್ಟೇಡಿಯಂನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ.

ಮೊದಲ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಮೇ 21ರ ತನಕ ಪಂದ್ಯಗಳು ನಡೆಯಲಿವೆ. ಲೀಗ್ ನಲ್ಲಿ ಒಟ್ಟು 70 ಪಂದ್ಯಗಳಿದ್ದು, ಪ್ರತಿ ತಂಡ 14 ಪಂದ್ಯಗಳನ್ನು ಆಡಲಿವೆ. ಕಳೆದ 15 ಸೀಸನ್ ಗಳಿಂದ ಒಮ್ಮೆಯೂ ಕಪ್ ಗೆಲ್ಲದ ಆರ್ ಸಿಬಿ ಈ ಬಾರಿಯಾದರೂ ಗೆದ್ದು ಫ್ಯಾನ್ಸ್ ಆಸೆಯನ್ನು ಈಡೇರಿಸುತ್ತಾ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!