ತನ್ನೊಂದಿಗೆ ಪಂಜಾಬ್ ತಂಡ ಹೊರ ಹಾಕಿದ ದೆಹಲಿ

235

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್-2023 ಟೂರ್ನಿ ಕೊನೆಯ ಹಂತಕ್ಕೆ ಬಂದಿದೆ. ಪ್ಲೇಆಫ್ ಸುತ್ತಿಗೆ ಹೋಗಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಂಜಾಬ್ ಸೋಲುವ ಮೂಲಕ ನಿರಾಸೆ ಅನುಭವಿಸಿದೆ. ದೆಹಲಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 15 ರನ್ ಗಳಿಂದ ಸೋತಿದೆ.

ಮೊದಲು ಬ್ಯಾಟ್ ಮಾಡಿದ ದೆಹಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 213 ರನ್ ಗಳಿಸಿತು. ನಾಯಕ ವಾರ್ನರ್ 42, ಪೃಥ್ವಿ ಶಾ 54 ಹಾಗೂ 37 ಬೌಲ್ ಗಳಲ್ಲಿ 82 ರನ್ ಗಳಿಸಿದ ರೋಸ್ವೋ, ಕೊನೆಯಲ್ಲಿ ಸಾಲ್ಟ್ 26 ರನ್ ಗಳ ಆಟದಿಂದಾಗಿ 213 ರನ್ ಗಳಿಸಿತು.

ಈ ಸ್ಕೋರ್ ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿ ಸೋಲು ಅನುಭವಿಸಿತು. ಲಿವಿಂಗ್ ಸ್ಟನ್ ಭರ್ಜರಿ 9 ಸಿಕ್ಸ್, 5 ಫೋರ್ ಗಳೊಂದಿಗೆ 48 ಬೌಲ್ ಗಳಲ್ಲಿ 94 ರನ್ ಗಳಿಸಿದ್ದು ವ್ಯರ್ಥವಾಯಿತು. ಟೈಡೆ 55 ರನ್ ಗಳಿಸಿದರು. ಪಾಯಿಂಟ್ ಪಟ್ಟಿಯಲ್ಲಿ 9 ಸ್ಥಾನದಲ್ಲಿರುವ ಡೆಲ್ಲಿ ತಂಡ ಈ ಗೆಲುವಿನೊಂದಿಗೆ ಪಂಜಾಬ್ ತಂಡದ ಪ್ಲೇಆಫ್ ಕನಸನ್ನು ನುಚ್ಚುನೂರು ಮಾಡಿತು.

13 ಪಂದ್ಯಗಳಲ್ಲಿ 9 ಗೆದ್ದು 18 ಪಾಯಿಂಟ್ಸ್ ಗಳೊಂದಿಗೆ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದೆ. ಸಿಎಸ್ಕೆ 13 ಪಂದ್ಯಗಳಲ್ಲಿ 7 ಗೆದ್ದು, 1 ಟೈ ಆಗಿ 15 ಪಾಯಿಂಟ್ಸ್ ನೊಂದಿಗೆ 2ನೇ ಸ್ಥಾನದಲ್ಲಿದೆ. ಲಖನೌ ಸೂಪರ್ ಜಯಂಟ್ಸ್ ಸಹ 15 ಪಾಯಿಂಟ್ಸ್ ಗಳೊಂದಿಗೆ 3ನೇ ಸ್ಥಾನ, 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದ ಮುಂಬೈ 4ನೇ ಸ್ಥಾನ, 12ರಲ್ಲಿ 6 ಗೆದ್ದ ಆರ್ ಸಿಬಿ 5ನೇ ಸ್ಥಾನ, 13ರಲ್ಲಿ 6 ಗೆದ್ದ ರಾಜಸ್ಥಾನ 6ನೇ ಸ್ಥಾನ, ಕೆಕೆಆರ್ 13ರಲ್ಲಿ 6 ಗೆದ್ದು 7ನೇ ಸ್ಥಾನ, ಪಂಜಾಬ್ 13ರಲ್ಲಿ 6 ಗೆದ್ದು 8ನೇ ಸ್ಥಾನದಲ್ಲಿದೆ.




Leave a Reply

Your email address will not be published. Required fields are marked *

error: Content is protected !!