ಪ್ರಜಾಸ್ತ್ರ ಸುದ್ದಿ
ಅರಸೀಕೆರೆ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಹೊರಟಿರುವ ಶಾಸಕ ಶಿವಲಿಂಗೇಗೌಡ ಅವರು 50 ಸಾವಿರ ರೂಪಾಯಿ ವಿಚಾರವಾಗಿ ತಾಕೀತು ಮಾಡಿದ ಆಡಿಯೋ ವೈರಲ್ ಆಗಿದೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡುವ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರ ಪತಿಗೆ 50 ಸಾವಿರ ರೂಪಾಯಿ ನೀಡಿದ ಹಣಕ್ಕಾಗಿ ಶಾಸಕರು ಫೋನ್ ಮಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ.
ಗ್ರಾಮ ಪಂಚಾಯ್ತಿ ಸದಸ್ಯೆ ಸೌಮ್ಯ ಅವರ ಪತಿ ವಾಸುಗೆ ಶಿವಲಿಂಗೇಗೌಡ ಅವರು ಫೋನ್ ಮಾಡಿ, ನೀನು ಬೇರೆಯವರ ಪರ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಹೀಗಾಗಿ ನಿನಗ ಕೊಟ್ಟಿರುವ 50 ಸಾವಿರ ರೂಪಾಯಿ ವಾಪಸ್ ಕೊಡು ಹೇಳಿರುವ ಆಡಿಯೋ ಹರಿದಾಡುತ್ತಿದೆ.