ಯಡಿಯೂರಪ್ಪ, ಸಿದ್ದರಾಮಯ್ಯ ಕಾಲೆಳೆದ ಸಿ.ಎಂ ಇಬ್ರಾಹಿಂ

120

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ನಾವು 90ರ ದಶಕದಲ್ಲಿದ್ದ ಜನತಾ ದಳವನ್ನು ಮರು ಸ್ಥಾಪನೆ ಮಾಡುತ್ತೇವೆ. ಮಹಿಮಾ ಪಾಟೇಲ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

ಯಡಿಯೂರಪ್ಪನವರ ಪರಿಸ್ಥಿತಿ ತಬ್ಬಲಿ ಆದೆಯಾ ಮಗನೆ ಎನ್ನುವ ಹಾಗಿದೆ. ಸಿದ್ದರಾಮಯ್ಯನವರು ವರುಣಾದಿಂದ ಸ್ಪರ್ಧಿಸಲಿ. ಕೋಲಾರಕ್ಕೆ ಹೋದರೆ ಅವರನ್ನು ಬಿಸ್ಮಿಲ್ಲಾ ಮಾಡುತ್ತಾರೆ ಎಂದು ಇಬ್ಬರು ನಾಯಕರ ಕಾಲೆಳೆದರು.

ಸಿಎಂ ಬೊಮ್ಮಾಯಿ ಅವರು ಕೇಶವಕೃಪಾ, ಬಸವಕೃಪಾ ಮಧ್ಯ ಸಿಲುಕಿ ಒದ್ದಾಡುತ್ತಿದ್ದಾರೆ. ನಮ್ಮಲ್ಲಿ ಟಿಕೆಟ್ ಕೊಡುವ ಜಾಗದಲ್ಲಿದ್ದವರು ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಹೊರಟ್ಟಿಯವರು ಏನು ಮಾಡುತ್ತಿದ್ದಾರೆ. ಕೊನರೆಡ್ಡಿ ಅವರು ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ. ಬೊಮ್ಮಾಯಿ ಅವರು ಬಂದರೆ ಅದ್ಧೂರಿ ಸ್ವಾಗತ ನೀಡುತ್ತೇವೆ ಎಂದರು.

ಕುಮರಸ್ವಾಮಿ ಅವರ ನೇತೃತ್ವದ ಪಂಚರತ್ನ ಯಾತ್ರೆ ಭರ್ಜರಿಯಾಗಿ ನಡೆಯುತ್ತಿದೆ. ಆರೋಗ್ಯ, ಶಿಕ್ಷಣ, ನೀರಾವರಿ ನಮ್ಮ ಮೊದಲ ಆದ್ಯತೆ. ಇದನ್ನು ಈಡೇರಿಸದಿದ್ದರೆ 2028ರಲ್ಲಿ ಮತ್ತೆ ಮತ ಕೇಳಲು ಬರುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ 70 ಸೀಟಿ, ಉತ್ತರ ಕರ್ನಾಟಕದಲ್ಲಿ 40 ಸೀಟು ಗೆಲ್ಲುತ್ತೇವೆ. ಐದು ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಪಡಿಸಿ ಅಧಿಕಾರಕ್ಕೆ ಬರಬೇಕು ಅಂತಾ ಹೇಳಿದರು.
Leave a Reply

Your email address will not be published. Required fields are marked *

error: Content is protected !!