ನೀಲ್ಮಣಿ ಹಾಗೂ ಮೌಜೊಗೆ ಜ್ಞಾನಪೀಠ ಗರಿ

324

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಆಸ್ಸಾಂ ಕವಿ ನೀಲ್ಮಣಿ ಪೋಕನ್ ಅವರಿಗೆ 56ನೇ ಜ್ಞಾನಪೀಠ ಪ್ರಶಸ್ತಿ ಹಾಗೂ ಕೊಂಕಣಿ ಸಣ್ಣಕಥೆಗಳ ಲೇಖಕ ದಾಮೋದರ್ ಮೌಜೊ ಅವರಿಗೆ 57ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ನೀಲ್ಮಣಿ ಪೋಕನ್ 1981ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1990ರಲ್ಲಿ ಪದ್ಮಶ್ರೀ, 1997ರಲ್ಲಿ ಆಸ್ಸಾಂ ವ್ಯಾಲಿ ಲೆಟ್ರರಿ ಪ್ರಶಸ್ತಿ, 2002ರಲ್ಲಿ ಸಾಹಿತ್ಯ ಅಕಾಡಮಿ ಫೆಲೋಶಿಪ್ ಪಡೆದಿದ್ದಾರೆ. ಆಸ್ಸಾಂನ ಡೆರಗಾಂನ್ ನಲ್ಲಿ 1933ರಲ್ಲಿ ಜನಿಸಿದ್ದಾರೆ.

ಇನ್ನು ಗೋವಾದಲ್ಲಿ ಜನಿಸಿದ ಮೌಜೊ ಸಣ್ಣಕತೆ ಹಾಗೂ ವಿಮರ್ಶಾ ಕೃತಿಗಳನ್ನು ರಚಿಸಿದವರು. 1983ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿದ್ದಾರೆ. ಸಾಕಷ್ಟು ಹೋರಾಟಗಳಲ್ಲಿ ಭಾಗವಹಿಸಿದ್ದವರು. 2015ರಲ್ಲಿ ನಡೆದ ಸಂಶೋಧಕ ಎಂ.ಎಂ ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಮಾತನಾಡಿದ್ದರು. ಇನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ವೇಳೆ ಮೌಜೊ ಅವರಿಗೆ ಜೀವ ಬೆದರಿಕೆ ಇದೆ ಅನ್ನೋ ವಿಷಯ ತಿಳಿದು ಬಂದಿತ್ತು.

2019ರಲ್ಲಿ ಮಲಯಾಳಂ ಕವಿ ಅಕ್ಕಿತಮ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಇದು ದೇಶದಲ್ಲಿ ಅತಿ ದೊಡ್ಡ ಮೊತ್ತ ಹೊಂದಿರುವ ಸಾಹಿತ್ಯ ಪ್ರಶಸ್ತಿಯಾಗಿದೆ. 2015ರಲ್ಲಿ ಪರಿಸ್ಕರಣೆ ಮಾಡಿದ್ದು 11 ಲಕ್ಷ ರೂಪಾಯಿ ನೀಡಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!