‘ಕಬ್ಜ’ ಟೀಂನ ದಾಖಲೆಯ ಸರಮಾಲೆ

515

ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಮೂವಿ ಸಾಕಷ್ಟು ಕುತೂಹಲ ಮೂಡಿಸಿದೆ. ಉಪ್ಪಿ ಅಭಿಮಾನಿಗಳು ಈಗಿನಿಂದಲೇ ಹಬ್ಬ ಮಾಡ್ತಿದ್ದಾರೆ. ಇದರ ನಡುವೆ ಕಬ್ಜ ಹೊಸ ದಾಖಲೆ ಬರೆಯುತ್ತಿದೆ. ಈ ಹಿಂದೆ ಯಾರು ಮಾಡಿರದ ಸಹಾಸಕ್ಕೆ ಉಪ್ಪಿ ಮತ್ತು ಆರ್.ಚಂದ್ರು ಕೈ ಹಾಕಿದ್ದಾರೆ.

ಡಾನ್ ಕಥೆಯನ್ನ ಹೊಂದಿರುವ ಚಿತ್ರದಲ್ಲಿ ಉಪ್ಪಿ ಎದುರು ಏಳು ಮಂದಿ ದೊಡ್ಡ ದೊಡ್ಡ ವಿಲನ್ ಗಳು ಇರಲಿದ್ದಾರೆ. ಐದುನೂರು ಜನ ಗ್ಯಾಂಗ್ ಸ್ಟಾರ್ ಇರಲಿದ್ದಾರೆ. ಕನ್ನಡದ ಪ್ರಕಾಶ ರೈ, ತೆಲುಗಿನ ಜಗಪತಿ ಬಾಬು, ಹಿಂದಿಯಿಂದ ನಾನಾ ಪಾಟೇಕರ್, ತಮಿಳಿನ ಸಮುದ್ರಖಣಿ, ಜಯಪ್ರಕಾಶ ರೆಡ್ಡಿ, ಪ್ರದೀಪ ರಾವತ್, ಮನೋಜ ಬಾಜ್ಪೇಯಿ ಸೇರಿ ಏಳು ಭಾಷೆಯ ಏಳು ಖಳನಟರು ಇದರಲ್ಲಿ ನಟನೆ ಮಾಡ್ತಿದ್ದಾರೆ.

ನವೆಂಬರ್ 15ರಿಂದ ಶೂಟಿಂಗ್ ಗೆ ಪ್ಲಾನ್ ಮಾಡಿರುವ ಕಬ್ಜ ಟೀಂ, ಏಳು ಭಾಷೆಗಳಲ್ಲಿ ಚಿತ್ರವನ್ನ ರಿಲೀಸ್ ಮಾಡುವ ಮೂಲಕ ಪ್ಯಾನ್ ಇಂಡಿಯಾ ಲೆವಲ್ ಸಿನ್ಮಾ ಮಾಡ್ತಿದೆ. ಇದಕ್ಕಾಗಿ ನಟ ಉಪೇಂದ್ರ ಫುಲ್ ವರ್ಕೌಟ್ ಮಾಡ್ತಿದ್ದು, ಮರಳಿ ತಮ್ಮ ಮಾಸ್ ಲುಕ್ ಗೆ ರೀ ಎಂಟ್ರಿ ಕೊಡ್ತಿದ್ದಾರೆ. ಐ ಲವ್ ಯು ಎಂದು ಜೋಡಿಯಾಗಿದ್ದ ಉಪೇಂದ್ರ ಮತ್ತು ಆರ್.ಚಂದ್ರು ಹೊಸ ದಾಖಲೆ ಬರೆಯಲು ಹೊರಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!