ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ರಾಣೆಬೆನ್ನೂರು: ಮಾತೊಶ್ರೀ ಮಹಾದೇವಕ್ಕ ಮಂಗಳ ವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ವತಿಯಿಂದ ಯುವಜನತೆಗೆ ಕಲಾ ತರಬೇತಿ ಶಿಬಿರ ನಡೆಸುತ್ತಿದೆ. ನಾಡಿನ ಖ್ಯಾತ ಗಾಯಕ, ಸಂಗೀತ ಸಂಯೋಜಕ ಲಕ್ಷ್ಮಿರಾಮ್ ಅವರ ಸಾರಥ್ಯದಲ್ಲಿ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಕಂಸಾಳೆ ನೃತ್ಯ, ಜಾನಪದ ರೂಪಕ, ಕಂಜರ ನುಡಿಸುವುದು, ಜಾನಪದ ಗೀತೆ, ಭಾವಗೀತೆ, ರಂಗಗೀತೆ, ದೇಶಭಕ್ತಿ ಗೀತೆ ಹಾಗೂ ದಾರ್ಶನಿಕ ಗೀತೆಗಳು ಸೇರಿದಂತೆ ಹಲವು ಕಲಾ ಪ್ರಕಾರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಆಸಕ್ತರು ಇದರಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜ ಸಾವಕ್ಕನವರ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಈ ಮೊಬೈಲ್ ನಂಬರ್ ಗೆ 9945721711 ಸಂಕಪರ್ಕಿಸಬಹುದು.

ಸುಮಾರು 20 ವರ್ಷಗಳಿಂದ ಲಕ್ಷ್ಮಿರಾಮ್ ಅವರು ನಾಡಿನ ಖ್ಯಾತ ಕಲಾವಿದೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾವಿರಾರು ವೇದಿಕೆಗಳಲ್ಲಿ ಹಾಡಿದ್ದಾರೆ. ಸಾವಿರಾರು ಶಿಷ್ಯರಿಗೆ ಕಂಸಾಳೆ ಮತ್ತು ವಿವಿಧ ಗಾಯನ ಕಲಿಸಿದ್ದಾರೆ. ಇವರಿಗೆ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ ಸನ್ಮಾನ ಸಂದಿವೆ. ಇವರು ಕಲಾ ತರಬೇತಿ ಶಿಬಿರಕ್ಕೆ ಕಲಿಸಲು ಬರುತ್ತಿರುವುದು ನಮ್ಮ ಭಾಗ್ಯ. ಇದನ್ನು ರಾಣೆಬೆನ್ನೂರಿನ ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.