ಹಿರಿಯ ಖಳನಟ ಲಕ್ಷ್ಮಣ ನಿಧನ

201

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್(74) ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಭಾನುವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತು. ಸೋಮವಾರ ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ನಿಧನರಾಗಿದ್ದಾರೆ. ಪೋಷಕ ನಟ ಲಕ್ಷ್ಮಣ್ ನಿಧನಕ್ಕೆ ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ.

ವಿಷ್ಣುವರ್ಧನ್, ಅಂಬರೀಶ್, ಶಂಕರನಾಗ್, ದೇವರಾಜ್ ಸೇರಿದಂತೆ ಕನ್ನಡದ ಖ್ಯಾತ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಅತಿ ಹೆಚ್ಚಾಗಿ ಖಳನಾಯಕನಾಗಿ ಮಿಂಚಿದವರು. ಪೊಲೀಸ್ ಪಾತ್ರ, ಊರ ಮುಖ್ಯಸ್ಥನ ಪಾತ್ರ, ಉದ್ಯಮಿ ಹೀಗೆ ಯಾವುದೇ ರೋಲ್ ಮಾಡಿದರೂ ಅವರದ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು.

ಒಲವಿನ ಉಡುಗೊರೆ, ಸಾಂಗ್ಲಿಯಾನ, ಯಜಮಾನ, ಸೂರ್ಯವಂಶ ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ ಲಕ್ಷ್ಮಣ್ ಅಭಿನಯಿಸಿದ್ದಾರೆ. ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
Leave a Reply

Your email address will not be published. Required fields are marked *

error: Content is protected !!