ವಿವಿಧ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪಟ್ಟಿ ಪ್ರಕಟ

323

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2019-20ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಲಾಗಿದ್ದು, ನಾಳೆ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

1. ಬಸವ ರಾಷ್ಟ್ರೀಯ ಪ್ರಶಸ್ತಿ – ಬಸವಲಿಂಗಪಟ್ಟದೇವರು
2. ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ – ಡಾ.ಪಂ. ನರಸಿಂಹಲು ವಡವಾಟಿ
3. ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ – ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ
4. ನಾಟ್ಯರಾಣಿ ಶಾಂತಲಾ ಪ್ರಶಸ್ತಿ – ಬಿ.ಕೆ. ವಸಂತಲಕ್ಷ್ಮಿ
5. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ – ಚಿ.ಸು. ಕೃಷ್ಣಶೆಟ್ಟಿ
6. ಜಕಣಾಚಾರಿ ಪ್ರಶಸ್ತಿ – ಬಿ.ಎಸ್. ಯೋಗಿರಾಜ
7. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ -ಮದಿರೆ ಮರಿಸ್ವಾಮಿ
8. ಜಾನಪದಶ್ರೀ ಪ್ರಶಸ್ತಿ -ಬಿ. ಟಾಕಪ್ಪ ಕಣ್ಣೂರು
9. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ -ರಾ.ನಂ. ಚಂದ್ರಶೇಖರ
10. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ – ಡಾ.ಚೂಡಾಮಣಿ ನಂದಗೋಪಾಲ್
11. ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ – ಪ್ರೊ. ಸಿದ್ದಣ್ಣ ಉತ್ನಾಳ
12. ಅಕ್ಕಮಹಾದೇವಿ ಪ್ರಶಸ್ತಿ – ಡಾ.ಜಯಶ್ರೀ ದಂಡೆ
13. ನಿಜಗುಣ ಪುರಂದರ ಪ್ರಶಸ್ತಿ – ಗೌರಿ ಕುಪ್ಪುಸ್ವಾಮಿ
14. ಸಂತಶಿಶುನಾಳ ಶರೀಫ ಪ್ರಶಸ್ತಿ – ಪಂ.ವಾದಿರಾಜ ನಿಂಬರಗಿ
15. ಕುಮಾರವ್ಯಾಸ ಪ್ರಶಸ್ತಿ – ಗಂಗಮ್ಮ ಕೇಶವಮೂರ್ತಿ




Leave a Reply

Your email address will not be published. Required fields are marked *

error: Content is protected !!