‘ಸಮರ್ಥ’ವಾಗಿ ನಡೆದ ಕನ್ನಡ-ತಮಿಳು ಕಾವ್ಯಗಳ ಅನುಸಂಧಾನ

1504

ಸಮರ್ಥ ಕನ್ನಡಿಗರು ವೇದಿಕೆ ವತಿಯಿಂದ ಬೆಂಗಳೂರಿನ ಸೌಥ್ ಎಂಡ್ ಸರ್ಕಲ್ ಬಳಿಯಿರುವ ಎಕ್ಸಾಯ್ಡ್ ವಿಮಾ ಕಂಪನಿಯ ಸಭಾಂಗಣದಲ್ಲಿ ‘ಕನ್ನಡ-ತಮಿಳು ಕಾವ್ಯಗಳ ಅನುಸಂಧಾನ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.

ವಿದುಷಿ ಹರ್ಶಿತಾ ಎಂ ಪುತ್ತೂರು ಅವರ ಭಾವಗೀತೆ ಹಾಡಿನ ಮೂಲಕ ಕಾರ್ಯಕ್ರಮ ಶುರು ಮಾಡಲಾಯ್ತು. ಕಾರ್ಯಕ್ರಮದ ಕುರಿತು ಸಮರ್ಥ ಕನ್ನಡಿಗರ ಸಂಘದ ಪ್ರಧಾನ ಸಂಚಾಲಕಾರದ ಲಿಂಗೇಶ ಹುಣಸೂರು ಪ್ರಾಸ್ತಾವಿಕವಾಗಿ ಮಾತ್ನಾಡಿ, ಎರಡು ವರ್ಷಗಳಲ್ಲಿ ತಮ್ಮ ವೇದಿಕೆ ಬೆಳೆದು ಬಂದ ಹಾದಿ ಬಗ್ಗೆ ಮಾತ್ನಾಡಿದ್ರು.

ಸಾಹಿತ್ಯದ ಜೊತೆ ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮಗಳನ್ನ ಸಿದ್ಧಮಾದರಿಯ ಸೂತ್ರಗಳನ್ನ ಮುರಿದು ಹೇಗೆ ಯಶಸ್ವಿಯಾಗಿ ಮಾಡಿಕೊಂಡು ಬರಲಾಗ್ತಿದೆ ಅಂತಾ ಹೇಳಿದ್ರು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಡಾ.ಎನ್ ದೇವರಾಜ್ ಯುವ ಕವಿಗಳಿಗೆ ಕಾವ್ಯದ ಅಧ್ಯಯನದ ಕುರಿತು ಒಂದಿಷ್ಟು ಸಲಹೆ ಸೂಚನೆಗಳನ್ನ ನೀಡಿದ್ರು. ಅದೇ ರೀತಿ ಗೌರವಾಭಿನಂದನೆ ಸಲ್ಲಿಸಿ ಮಾತ್ನಾಡಿದ ಪ್ರಕಾಶಮೂರ್ತಿ ಅವರು, ಕನ್ನಡ ಉಳಿಸಿ ಬೆಳಸಲು ಮಾಡಬೇಕಾದ ಕಾಯಕದ ಬಗ್ಗೆ ತಿಳಿಸಿದ್ರು.

ಸಾಧಕರಿಗೆ ಸನ್ಮಾನ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಿಗಣೇಷ ಮಾಗೋಡು ಅವರು ಮೊದಲನೇ ಕವಿಗೋಷ್ಠಿಯ ಸಮನ್ವಯ ವಹಿಸಿಕೊಂಡಿದ್ರು. ಎರಡನೇ ಕವಿಗೋಷ್ಠಿಯ ಸಮನ್ವಯವನ್ನ ಲೇಖಕಿ ಇಂದಿರಾ ಶರಣ ಜಮ್ಮಲದಿನ್ನಿ ಅವಹಿಸಿಕೊಂಡಿದ್ರು. ಕವಿತೆ ವಾಚಿಸಿದ ಕವಿಗಳ ಕಾವ್ಯದ ಕುರಿತು ತುಂಬಾ ಅಚ್ಚುಕಟ್ಟಾಗಿ ಮಾತ್ನಾಡಿದ ಇವರ ತಮ್ಮ ಕವಿತೆಗಳನ್ನ ವಾಚನ ಮಾಡುವ ಮೂಲಕ ಕನ್ನಡ ಕಾವ್ಯಗಳ ಕುರಿತು ಸಂಕ್ಷಿಪ್ತವಾಗಿ ಮಾತ್ನಾಡಿದ್ರು.

ಇನ್ನು ಕನ್ನಡ ಕಾವ್ಯಗಳ ಕುರಿತು ಮಾತ್ನಾಡಿದ ಪ್ರಾಧ್ಯಾಪಕ ಡಾ. ಟಿ ಯಲ್ಲಪ್ಪ ಅವರು, ರನ್ನ, ಪಂಪನ ಕೃತಿಗಳ ಆದಿಯಾಗಿ ಕುವೆಂಪು, ಬೇಂದ್ರೆ, ಅಡಿಗ, ಸಿದ್ದಲಿಂಗಯ್ಯ, ಡಿ.ಆರ್ ನಾಗರಾಜ್ ಕಾವ್ಯಗಳ ಮೇಲೆ ಒಂದಿಷ್ಟು ಬೆಳಕು ಚೆಲ್ಲಿದ್ರು. ಇದರ ಜೊತೆಗೆ ಗಾಂಧಿವಾದ, ಅಂಬೇಡ್ಕರ್ ವಾದ, ಪರಿಯಾರ್ ಹಾಗೂ ಲೋಹಿಯಾ ವಾದಗಳ ಬಗ್ಗೆ ಮಾತ್ನಾಡಿದ ಅವರು, ತಳಸಮುದಾಯಗಳು ಎದುರಿಸ್ತಿರುವ ಸಮಸ್ಯೆಗಳು, ಇವುಗಳ ಬಗ್ಗೆ ನಡೆದ ಚಳವಳಿ ಅದರ ಫಲವಾಗಿ ಬೆಳೆದು ಬಂದ ಬಂಡಾಯ ಸಾಹಿತ್ಯ ಮತ್ತು ಅದರ ಪರಿಣಾಮಗಳೇನು ಅನ್ನೋದು ತಿಳಿಸಿಕೊಟ್ರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿಗಳ ಜೊತೆಗೊಂದು ಫೋಟೋ

ಇನ್ನು ತಮಿಳು ಕಾವ್ಯಗಳ ಕುರಿತು ಮಾತ್ನಾಡಿದ ತಮಿಳುನಾಡಿನ ಪುದುಕೊಟ್ಟೈನ ಅಣ್ಣಾ ಕದೀಜಾ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಕೆ ಸುಮತಿ ಅವರು, ಕವಿ ರೆಹಮಾನ್ ಅವರ ಕಾವ್ಯಗಳ ಕುರಿತು ಸಂಕ್ಷಿಪ್ತವಾಗಿ ಮಾತ್ನಾಡಿದ್ರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದನಿಯಿಲ್ಲದವರ, ಕೆಳಸಮುದಾಯಗಳ ಪರವಾಗಿ ಕಾವ್ಯ ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ತಿಳಿಸಿಕೊಟ್ರು.

ಇದೇ ವೇಳೆ ಕನ್ನಡ ಉಪನ್ಯಾಸಕಿ ಹಾಗೂ ಅನುವಾದಕಿ ಡಾ ಮಲರ್ ವಿಳಿ ಕೆ, ಶಿಕ್ಷಣ ಸಂಯೋಜಕಿ ಡಾ.ವಿ ಸೌಭಾಗ್ಯ ಕೃಷ್ಣೇಗೌಡ, ಕವಿ, ವಿಮರ್ಶಕ ಡಾ.ಟಿ ಯಲ್ಲಪ್ಪ ಹಾಗೂ ಜನಪದ ಗಾಯಕ ಕುಣಿಗಲ್ ರಾಮಚಂದ್ರ ಟಿ ಅವರಿಗೆ ಗೌರವಿಸಲಾಯ್ತು. ಅನುವಾದ ಕ್ಷೇತ್ರದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಹಿರಿಯ ಅನುವಾದಕ ದಾಸ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರನ್ನ ಸನ್ಮಾನಿಸಿದ್ರು.

ಕವಿಗೋಷ್ಠಿಯಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಯ ಹಾಗೂ ಬೆಂಗಳೂರಿನ ಯುವ ಹಾಗೂ ಹಿರಿಯ ಕವಿಗಳು ಸೇರಿದಂತೆ 25 ಕವಿಗಳು ಕನ್ನಡ ಹಾಗೂ ತಮಿಳಿನಲ್ಲಿ ಕವಿತೆಗಳನ್ನ ವಾಚಿಸಿದ್ರು. ಬಳಿಕ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನ ನೀಡಲಾಯ್ತು.

ಸಮರ್ಥ ಕನ್ನಡಿಗರ ತಂಡದ ಲಿಂಗೇಶ ಹುಣಸೂರು, ಜಯಲಕ್ಷ್ಮೀ ಮಡಿಕೇರಿ, ರಮೇಶ ಎಂ.ಎಸ್ ದೊಡ್ಡಿ, ಪ್ರಕಾಶ ಮೂರ್ತಿ, ಬಸವರಾಜು ಎಸ್. ಕಲ್ಲುಸಕ್ಕರೆ ಅವರು ಇಡೀ ಕಾರ್ಯಕ್ರಮವನ್ನ ನಡೆಸಿಕೊಟ್ರು.


TAG


2 thoughts on “‘ಸಮರ್ಥ’ವಾಗಿ ನಡೆದ ಕನ್ನಡ-ತಮಿಳು ಕಾವ್ಯಗಳ ಅನುಸಂಧಾನ

Leave a Reply

Your email address will not be published. Required fields are marked *

error: Content is protected !!