ಬ್ರೇಕಿಂಗ್ ನ್ಯೂಸ್
Search

ಅನಂತನಾಗ್ ಇಂದು ಸಂಜೆ ಬಿಜೆಪಿ ಸೇರ್ಪಡೆ

151

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕನ್ನಡ ಚಿತ್ರಂಗದ ಹಿರಿಯ ನಟ, ಮಾಜಿ ಸಚಿವ ಅನಂತನಾಗ್ ಇಂದು ಸಂಜೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಮತ್ತೊಮ್ಮೆ ತಮ್ಮ ರಾಜಕೀಯ ಜೀವನ ಪ್ರಾರಂಭಿಸಲಿದ್ದಾರೆ.

ಕನ್ನಡದ ಜೊತೆಗೆ ಹಿಂದಿ, ಮರಾಠಿ, ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಯ 300 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 200 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಹಲವು ಭಾಷಣಗಳಲ್ಲಿ ಮೋದಿ ಹಾಗೂ ಬಿಜೆಪಿ ಸರ್ಕಾರದ ಕಾರ್ಯ, ಹಿಂದುತ್ವದ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡುತ್ತಾ ಬರುತ್ತಿದ್ದಾರೆ. ಆಗಲೇ‌ ಇವರು ಬಿಜೆಪಿ ಸೇರೋದು ಪಕ್ಕಾ ಎನ್ನಲಾಗಿತ್ತು.‌ ಇಂದು ಸಂಜೆ ಅದು ಅಧಿಕೃತವಾಗುತ್ತಿದೆ.

ಈ ಹಿಂದೆ ಎಂಎಲ್ಸಿ, ಶಾಸಕರಾಗಿಯೂ ಆಯ್ಕೆ ಆಗಿದ್ದರು. ಜೆ.ಎಚ್ ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. 2004ರಲ್ಲಿ ಬೆಂಗಳೂರಿನ ಚಾಮರಾಜಪೇಟೆ‌ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ನಿಂದ ಎಸ್.ಎಂ ಕೃಷ್ಣ, ಬಿಜೆಪಿಯಿಂದ ಮುಖ್ಯಮಂತ್ರಿ ಚಂದ್ರು ಸ್ಪರ್ಧಿಸಿದ್ದರು. ಅಂದಿನ ಸೋಲಿನ ಬಳಿಕ ರಾಜಕೀಯದಿಂದ‌ ದೂರವಾಗಿದ್ದರು. ಈಗ ಬಿಜೆಪಿ ಮೂಲಕ ಮತ್ತೆ ರಾಜಕೀಯ ಮರು ಪ್ರವೇಶ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!