ಮಹಾರಾಷ್ಟ್ರ ಸಿಎಂ ಶಿಂಧೆ ಭ್ರಮೆಯಲ್ಲಿದ್ದಾರೆ: ಸಿಎಂ ಸಿದ್ದರಾಮಯ್ಯ

139

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಹಾರಾಷ್ಟ್ರದ ರೀತಿಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೀಳಿಸುವ ಆಪರೇಷನ್ ನಾಥ್ ನಡೆಸಲಾಗುತ್ತಿದೆ ಎನ್ನುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಏಕನಾಥ್ ಶಿಂಧೆ ಭ್ರಮೆಯಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಸಾಧ್ಯವಿಲ್ಲ. ಚುನಾವಣೆ ಸಂದರ್ಭದಲ್ಲಿಯೇ ಮಾಡಿ ವಿಫಲರಾಗಿದ್ದಾರೆ. ನಾವು ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ. ಅವರು ಸೋಲುತ್ತಾರೆ. ಹೀಗಾಗಿ ಹತಾಷೆಯಿಂದ ಸರ್ಕಾರ ಬೀಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್, ಲೋಕಸಭಾ ಚುನಾವಣೆಯ ಬಳಿಕ ಮಹಾರಾಷ್ಟ್ರ ಸರ್ಕಾರ ಉಳಿಯವುದೇ ಡೌಟು. ಅಲ್ಲಿಯ ಶಾಸಕರು ಉಲ್ಟಾ ಹೊಡೆಯುತ್ತಿದ್ದಾರೆ.  ಎನ್ ಸಿಪಿ, ಶಿವಸೇನೆ ಶಾಸಕರು ವಾಪಸ್ ಆಗುತ್ತಿದ್ದಾರೆ. ಅಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತೆ ಎಂದರು.

ಶಿಂಧೆ ಹೇಳಿದ್ದೇನು?

ಈ ಹಿಂದೆ ನಡೆದ ಸಭೆಯೊಂದರಲ್ಲಿ ಸಿಎಂ ಏಕನಾಥ್ ಶಿಂಧೆ, ನಾನು ಇತ್ತೀಚೆಗೆ ಕರ್ನಾಟಕದ ಸಭೆಗೆ ಹೋಗಿದ್ದೆ. ಮಹಾರಾಷ್ಟ್ರದಲ್ಲಿ ಹಿಂದಿನ ಸರ್ಕಾರ ಪತನವಾದಂತೆ ಕರ್ನಾಟಕದಲ್ಲಿ ಆಗಬೇಕು. ಅದಕ್ಕೆ ನಿಮ್ಮ ಅನುಭವ ಬೇಕು ಎಂದು ಅಲ್ಲಿಯ ಬಿಜೆಪಿ ನಾಯಕರು ಹೇಳಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.

ಕಾಂಗ್ರೆಸ್ ಸರ್ಕಾರ ಬೀಳಿಸುವುದು ಕಷ್ಟ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬೀಳಿಸುವುದು ಅಷ್ಟು ಸುಲಭದ ಮಾತಲ್ಲ. ಯಾಕಂದರೆ 224 ಸ್ಥಾನಗಳಲ್ಲಿ ಕಾಂಗ್ರೆಸ್ 136 ಪ್ಲಸ್ ಶಾಸಕರನ್ನು ಹೊಂದಿದೆ. ಬಿಜೆಪಿ 66, ಜೆಡಿಎಸ್ 19 ಶಾಸಕರನ್ನು ಹೊಂದಿದೆ. ಎರಡೂ ಪಕ್ಷಗಳು ಸೇರಿದರೂ 85 ಆಗುತ್ತೆ. ಜನಾರ್ಧನ್ ರೆಡ್ಡಿ ಸೇರಿದರೆ 86 ಆಗುತ್ತೆ. ಮ್ಯಾಜಿಕ್ ನಂಬರ್ ಆಗಿರುವ 113ರ ಸಮೀಪ ಸಹ ಬರುವುದಿಲ್ಲ. ಕಾಂಗ್ರೆಸ್ ಶಾಸಕರು ಬರುತ್ತಾರೆ ಅಂದರೂ 30 ಶಾಸಕರು ಬರಬೇಕು. ಇಷ್ಟೊಂದು ಪ್ರಮಾಣದಲ್ಲಿ ಶಾಸಕರು ಬಿಜೆಪಿಯೊಂದಿಗೆ ಕೈಜೋಡಿಸುವುದು ಕನಸಿನ ಮಾತು. ಹೀಗಾಗಿ ಕಾಂಗ್ರೆಸ್ ಸರ್ಕಾರ ಪತನ ಕಷ್ಟ.
Leave a Reply

Your email address will not be published. Required fields are marked *

error: Content is protected !!