ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ?

302

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ತಯಾರಿ ಜೋರಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆ ನಡೆಸಿದೆ. ಇನ್ನು ಉಳಿದ ಪಕ್ಷಗಳು ತಮ್ಮ ತಮ್ಮ ಶಕ್ತಿಗೆ ಅನುಗುಣವಾಗಿ ಸಿದ್ಧತೆ ನಡೆಸುತ್ತಿವೆ.

ಚುನಾವಣೆ ಎಂದ ಮೇಲೆ ಆಯಾ ಪಕ್ಷಗಳು ಆಂತರಿಕ ಸಮೀಕ್ಷೆ ನಡೆಸುತ್ತವೆ. ಅದರ ಆಧಾರದ ಮೇಲೆ ಯಾವ ಕ್ಷೇತ್ರದಲ್ಲಿ ಒಲವು ಇದೆ, ವಿರೋಧವಿದೆ ಅನ್ನೋದು ತಿಳಿದುಕೊಂಡು ಗೆಲುವಿನ ರಣತಂತ್ರಗಳನ್ನು ಹೆಣೆಯುತ್ತವೆ. ಇದರ ಜೊತೆಗೆ ಕೆಲ ಖಾಸಗಿ ಸಂಸ್ಥೆಗಳು ಸಹ ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತವೆ. ಅದರಂತೆ ಲೋಕ್ ಪೋಲ್ ಅನ್ನೋ ಸಂಸ್ಥೆ ನಡೆಸಿರುವ ಪ್ರಕಾರ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳಿದೆ.

ಬಿಜೆಪಿ 77-83 ಸ್ಥಾನ, ಕಾಂಗ್ರೆಸ್ 116-122, ಜೆಡಿಎಸ್ 21-27, ಇತರರು 1-4 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದೆ. ಈ ಮೂಲಕ ಆಡಳಿತರೂಢ ಬಿಜೆಪಿ 2ನೇ ಸ್ಥಾನಕ್ಕೆ ಬರಲಿದೆಯಂತೆ. ಇದು ಸಧ್ಯದ ಲೆಕ್ಕಾಚಾರವಿದೆ. ಚುನಾವಣೆ ದಿನಾಂಕ ಘೋಷಣೆ ಬಳಿಕ ಹಾಗೂ ಮತದಾನದ ಹೊತ್ತಿಗೆ ಮತದಾರರನ ಲೆಕ್ಕಾಚಾರ ಏನಾಗಿರುತ್ತೆ ಅನ್ನೋದು ತುಂಬಾ ಮುಖ್ಯವಾಗಿರುತ್ತೆ.




Leave a Reply

Your email address will not be published. Required fields are marked *

error: Content is protected !!