ಸಾಹಿತ್ಯ ಅಕಾಡಮಿ ವಾರ್ಷಿಕ ಪ್ರಶಸ್ತಿ, ದತ್ತಿ ಬಹುಮಾನ ಪ್ರಕಟ

317

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ವಿವಿಧ ದತ್ತಿ ಬಹುಮಾನಗಳನ್ನ ಪ್ರಕಟಿಸಿದೆ. 5 ಮಂದಿಗೆ 2020ನೇ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ನೀಡಲಾಗಿದೆ. ಇದು 50 ಸಾವಿರ ನಗದು ಬಹುಮಾನ ಹೊಂದಿದೆ.

ಡಾ.ಕೆ.ಆರ್ ಸಂಧ್ಯಾರೆಡ್ಡಿ, ಷಣ್ಮುಖಯ್ಯ ಅಕ್ಕೂರಮಠ, ಡಾ.ಕೆ.ಕೆಂಪೇಗೌಡ, ಅಶೋಕಪುರಂ ಕೆ. ಗೋವಿಂದರಾಜು, ಪ್ರೊ.ಅಮೃತ ಸೋಮೇಶ್ವರ ಅವರಿಗೆ ಗೌರವ ಪ್ರಶಸ್ತಿ ನೀಡಲಾಗಿದೆ. ಡಾ.ರಾಜಪ್ಪ ದಳವಾಯಿ, ಡಾ.ಜೆ.ಪಿ ದೊಡ್ಡಮನಿ, ಬಿ.ಟಿ ಜಾಹ್ನವಿ, ಪ್ರೇಮಶೇಖರ, ವೀಣಾ ಬನ್ನಂಜೆ, ಡಾ.ಎಂ.ಎಸ್ ಆಶಾದೇವಿ, ಶಿವಾನಂದ ಕಳವೆ, ಡಾ.ಮೃತ್ಯುಂಜಯ ರುಮಾಲೆ, ಡಿ.ವಿ ಪ್ರಹ್ಲಾದ್, ಪ್ರೊ.ಕಲ್ಯಾಣರಾವ ಜಿ. ಪಾಟೀಲ ಅವರಿಗೆ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ. ಇದು 25 ಸಾವಿರ ನಗದು ಬಹುಮಾನ ಹೊಂದಿದೆ.

ಇನ್ನು 2019ರಲ್ಲಿ ಪ್ರಕಟವಾದ ಸಾಹಿತ್ಯದ ವಿವಿಧ ಪ್ರಕಾರದ 18 ಕೃತಿಗಳಿಗೆ ವರ್ಷದ ಅತ್ಯುತ್ತಮ ಕೃತಿ ಬಹುಮಾನ ನೀಡಲಾಗಿದೆ. ಸತ್ಯಮಂಗಲ ಮಹಾದೇವ ಅವರ ಪಂಚವರ್ಣದ ಹಂಸ(ಕವನ ಸಂಕಲನ), ಉಷಾ ನರಸಿಂಹನ್ ಅವರ ಕಂಚುಗನ್ನಡಿ(ನಾಟಕ) ವಸುಧೇಂದ್ರ ಅವರ ತೆಜೋ ತುಂಗಭದ್ರ(ಕಾದಂಬರಿ) ಸೇರಿದಂತೆ 18 ಕೃತಿಗಳಿಗೆ ಬಹುಮಾನ ನೀಡಲಾಗಿದೆ. 9 ಪುಸ್ತಕಗಳಿಗೆ ದತ್ತಿ ಬಹುಮಾನ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!