‘ಕವಿ ಕಾವ್ಯ ಗಾನಯಾನ’ಕ್ಕೆ ಕವಿತೆಗಳ ಆಹ್ವಾನ

275

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ತನುಮನ ಸಂಸ್ಥೆ, ಮೈಸೂರು ಹಾಗೂ ಪ್ರಜಾಸ್ತ್ರ ವೆಬ್ ಪತ್ರಿಕೆ, ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕವಿ ಕಾವ್ಯ ಗಾನಯಾನ’ ಅನ್ನೋ ವಿನೂತನ ಸಂಗೀತ ಕಾರ್ಯಕ್ರಮ ಆಯೋಜಿಸಿವೆ.

ನವೆಂಬರ್ 29ರಂದು ಮೈಸೂರಿನಲ್ಲಿ ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಸಕ್ತ ಕವಿ, ಕವತ್ರಿಯರು ಸ್ವರಚಿತ ಎರಡು ಕವಿತೆಗಳನ್ನು ಕಳುಹಿಸಿಕೊಡಬೇಕು. ಒಂದು ಕವಿತೆ ಕಡ್ಡಾಯವಾಗಿ ನಾಡು, ನುಡಿಗೆ ಸಂಬಂಧಿಸಿದ್ದಾಗಿರಬೇಕು. ಕವಿತೆಗಳು 16 ಸಾಲಿನೊಳಗಿರಬೇಕು. ಆಯ್ಕೆ ಆದ ಸೂಕ್ತ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಸಮಾರಂಭದಲ್ಲಿ ಪ್ರಸ್ತುತ ಪಡಿಸಲಾಗುತ್ತೆ.

ಕವಿತೆ ಕಳುಹಿಸಿ ಕೊಡಬೇಕಾದ ಕೊನೆಯ ದಿನಾಂಕ ನವೆಂಬರ್ 21 ಸೋಮವಾರ ಸಂಜೆ 6ಗಂಟೆಯೊಳಗೆ. 9901313740 ನಂಬರ್ ಗೆ ವಾಟ್ಸಪ್ ಮಾಡಬೇಕು. ಆಯ್ಕೆಯಾದ ಕವಿ, ಕವಯತ್ರಿಯರು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
Leave a Reply

Your email address will not be published. Required fields are marked *

error: Content is protected !!