ಮಧುವಾಹಿನಿ ತಪ್ಪಲಲ್ಲಿ ‘ರಾಷ್ಟ್ರೀಯ ಕಾವ್ಯ ಕಮ್ಮಟ’

209

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಕಾಸರಗೋಡು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಕಾಸರಗೋಡು ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದೊಂದಿಗೆ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಕಾವ್ಯ ಕಮ್ಮಟ ನಡೆಯುತ್ತಿದೆ.

ವಿಜಯಪುರ ಮೂಲದ ಲೇಖಕಿ ಸರಸ್ವತಿ ಚಿಮ್ಮಲಗಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಗುರುವಾರ ಮುಂಜಾನೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 7 ಭಾಷೆ, 12 ನದಿಗಳನ್ನು ಹರಿಯುವ ತುಂಬಾ ಐತಿಹಾಸಿಕ ತಾಣದಲ್ಲಿ ಕಮ್ಮಟ ನಡೆಯುತ್ತಿರುವುದು ಖುಷಿಯ ಸಂಗತಿ ಎಂದರು.
ಮುಖ್ಯ ಅತಿಥಿಗಳಾದ ಹಿರಿಯ ಕವಿ ಡಾ.ರಮಾನಂದ ಬನಾರಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯದರ್ಶಿ ಪ್ರೊ.ಪಿ.ಎನ್ ಮೂಡಿತಾಯ ಮಾತನಾಡಿದರು.
ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶ್ರೀ ಮಠ ಧಾರ್ಮಿಕ, ಸಾಂಸ್ಕೃತಿಕ ಜೊತೆಗೆ ಸಾಹಿತ್ಯದ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ ವಶಂತಕುಮಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಿಜಿಸ್ಟರ್ ಕರಿಯಪ್ಪ ಎನ್, ಕಮ್ಮಟದ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಕೇಶವ ಬಂಗೇರ ಸೇರಿ ಅನೇಕರು ಉಪಸ್ಥಿತರಿದ್ದರು.

ನಂತರ ಹಿರಿಯ ವಿಮರ್ಶಕ ಲಕ್ಮೀಶ್ ತೋಳ್ಪಾಡಿ ಅವರು ಲೋಕ ಸೌಂದರ್ಯ ಮತ್ತು ಕಾವ್ಯ ಸೌಂದರ್ಯ, ಕವಿಯತ್ರಿ ಡಾ.ಯು.ಮಹೇಶ್ವರಿ ಅವರು ಕನ್ನಡ ಕಾವ್ಯ ಪರಂಪಪರೆ ಹಾಗೂ ಕಾವ್ಯ ರಚನೆಯ ಮೂಲತತ್ವಗಳ ಕುರಿತು ಡಾ.ವಸಂತಕುಮಾರ ಪೆರ್ಲ ಉಪನ್ಯಾಸ ನೀಡಿದರು. ಪ್ರತಿಗೋಷ್ಟಿಯ ಕೊನೆಯಲ್ಲಿ ಸಂವಾದ ನಡೆಸಲಾಯಿತು. ನಂತರ ರಾತ್ರಿ 9.30ರಿಂದ 10.30ರ ತನಕ ಕವಿಗೋಷ್ಠಿ ನಡೆಯಿತು. ಕಮ್ಮಟದಲ್ಲಿ ರಾಜ್ಯ, ಹೊರ ರಾಜ್ಯಗಳಿಂದ 45ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು ಶುಕ್ರವಾರ ಹಾಗೂ ಶನಿವಾರದವರೆಗೂ ಕಮ್ಮಟ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!