ರ್ಯಾಪ್ ಹೆಸರಿನಲ್ಲಿ ಜನಪದ ಸಂಸ್ಕೃತಿಗೆ ಅವಮಾನ: ಏನಿದು ವಿವಾದ?

342

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರ್ಯಾಪರ್ ಚಂದನ ಶೆಟ್ಟಿ ಮೊನ್ನೆಯಷ್ಟೇ ‘ಕೋಲುಮಂಡೆ ಜಂಗಮ ದೇವರು’ ಅನ್ನೋ ಸಾಂಗ್ ರಿಲೀಸ್ ಮಾಡಿದ್ದಾರೆ. ಜನುಮದ ಜೋಡಿ ಚಿತ್ರದಲ್ಲಿನ ಹಾಡಿನ ಮೊದಲ ಸಾಲುಗಳಿಂದ ಶುರುವಾಗುವ ಹಾಡು, ಭರ್ಜರಿ ಸೌಂಡ್ ಮಾಡ್ತಿದೆ. ಆದ್ರೆ, ಇದರ ಜೊತೆಗೆ ವಿವಾದ ಸೃಷ್ಟಿಸಿದೆ.

ಜಾನಪದ ಪರಂಪರೆಯಿಂದ ಇರುವ ಪಾತ್ರಗಳಿಗೆ ಅವಮಾನ ಮಾಡಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಶಂಕಮ್ಮ ಅನ್ನೋ ಪಾತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಚಾಮರಾಜನಗರ ಭಾಗದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಂದನ ಶೆಟ್ಟಿ, ನಮ್ಮ ಅರಿವಿಗೆ ಬರದೆಯಾಗಿರುವ ತಪ್ಪು ಇರಬಹುದು. ಉದ್ದೇಶಪೂರ್ವಕವಾಗಿ ಮಾಡಿಲ್ಲ. ಇದರಿಂದ ಯಾರಿಗಾದ್ರೂ ನೋವಾಗಿದ್ದಾರೆ ಕ್ಷಮಿಸಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!