ಬೆಂಗಳೂರು: ಕರೋನಾ ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ಸೋಮವಾರದಿಂದ ಮದ್ಯ ಮಾರಾಟ ಶುರುವಾಗಿದೆ. ಅಂದಿನಿಂದ ಮೂರು ದಿನದ ಮದ್ಯ ಮಾರಾಟದ ಲೆಕ್ಕ ನೋಡಿದ್ರೆ ಶಾಕ್ ಆಗುತ್ತೆ.
ಮೊದಲ ದಿನ 45 ಕೋಟಿ, 2ನೇ ದಿನ 197 ಕೋಟಿಯಷ್ಟು ಮದ್ಯ ಮಾರಾಟವಾಗಿದೆ. ಇನ್ನು ಮೂರನೇ ದಿನ ಬರೋಬ್ಬರಿ 231.60 ಕೋಟಿಯಷ್ಟು ಮದ್ಯ ಮಾರಾಟವಾಗಿದೆ. ಈ ಮೂಲಕ ಮೂರು ದಿನಗಳಲ್ಲಿ ಭರ್ಜರಿಯಾಗಿ ದಾಖಲಾಗಿದೆ.
ಈ ಮೂದಲು ರಾಜ್ಯದಲ್ಲಿ ಸರಾಸರಿ 90-95 ಕೋಟಿಯಷ್ಟು ಮದ್ಯ ಮಾರಾಟವಾಗ್ತಿತ್ತು. ಇದೀಗ ಅದು ಡಬಲ್ ರೀತಿಯಲ್ಲಿ ಮಾರಾಟವಾಗ್ತಿದೆ. ಪ್ರಸಕ್ತ 2020-21ನೇ ಸಾಲಿನಲ್ಲಿ 26,440 ಕೋಟಿ ರೂಪಾಯಿ ಮದ್ಯ ಮಾರಾಟದ ಗುರಿಯನ್ನ ಇಟ್ಟುಕೊಳ್ಳಲಾಗಿತ್ತು.