24 ಸಂಭವನೀಯ ಸಚಿವರ ಪಟ್ಟಿ ಹೀಗಿದೆ…

203

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. 135 ಶಾಸಕರು ಗೆದ್ದಿದ್ದು, 3ಕ್ಕೂ ಹೆಚ್ಚು ಬಾರಿ ಗೆದ್ದವರ ಸಂಖ್ಯೆಯೇ 100ರ ಮೇಲಿದೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ಅನ್ನೋ ಚರ್ಚೆ ನಡೆದಿದೆ. ಅಲ್ಲದೆ ಅನೇಕ ಹಿರಿಯ ಶಾಸಕರಿಗೆ ಈ ಬಾರಿ ಸಚಿವ ಸ್ಥಾನ ತಪ್ಪಿದೆಯಂತೆ.

ಸಂಭವನೀಯ ಸಚಿವರ ಪಟ್ಟಿ ನೋಡುವುದಾದರೆ..

ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಎಸ್.ಎಸ್ ಮಲ್ಲಿಕಾರ್ಜುನ್, ಹೆಚ್.ಸಿ ಮಹಾದೇವಪ್ಪ, ಭೈರತಿ ಸುರೇಶ್, ಪಿರಿಯಾಪಟ್ಟಣ ವೆಂಕಟೇಶ್, ಪುಟ್ಟರಂಗಶೆಟ್ಟಿ, ರಹೀಂ ಖಾನ್, ಕೃಷ್ಣ ಬೈರೇಗೌಡ, ಹೆಚ್.ಕೆ ಪಾಟೀಲ, ಚಿಂತಾಮಣಿ ಸುಧಾಕರ್, ಸಂತೋಷ ಲಾಡ್, ಮಧುಗಿರಿ ಕೆ.ಎನ್, ಚೆಲುವರಾಯಸ್ವಾಮಿ, ಮಾಂಕಾಳ ವೈದ್ಯ, ಮಧು ಬಂಗಾರಪ್ಪ, ಆರ್.ಬಿ ತಿಮ್ಮಾಪುರ, ರುದ್ರಪ್ಪ ಲಮಾಣಿ, ಕೆ.ಎನ್ ರಾಜಣ್ಣ, ಶರಣಪ್ರಕಾಶ್ ಪಾಟೀಲ, ಶಿವರಾಜ್ ತಂಗಡಗಿ, ಎನ್.ನಾಗೇಂದ್ರ, ಎನ್.ಎಸ್ ಬೋಸರಾಜ್ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಅಂತಿಮವಾಗಿವೆ ಎನ್ನಲಾಗುತ್ತಿದೆ.

ಇವರಿಗೆ ತಪ್ಪಿದ ಸಚಿವ ಸ್ಥಾನ?

ಎಂಎಲ್ ಸಿಗಳಾದ ಬಿ.ಕೆ ಹರಿಪ್ರಸಾದ್, ಸಲೀಂ ಅಹ್ಮದ್ ಪಟೇಲ್, ಶಾಸಕರಾದ ದಿನೇಶ ಗುಂಡೂರಾವ್, ಆರ್.ವಿ ದೇಶಪಾಂಡೆ, ಲಕ್ಷ್ಮಣ ಸವದಿ, ಎನ್.ಎ ಹ್ಯಾರೀಸ್, ತನ್ವೀರ್ ಸೇಠ, ಎಂ.ಕೃಷ್ಣಪ್ಪ, ಎನ್.ವೈ ಗೋಪಾಲಕೃಷ್ಣ, ಹೆಚ್.ಡಿ ರಂಗನಾಥ್, ಖನಿಜ್ ಫಾತಿಮಾ, ಬಸವರಾಜ್ ರಾಯರೆಡ್ಡಿ, ಅಶೋಕ ಪಟ್ಟಣ, ಹೆಚ್.ವೈ ಮೇಟಿ, ರಾಘವೇಂದ್ರ ಹಿಟ್ನಾಳ್, ಯು.ಬಿ ಬಣಕಾರ್, ನರೇಂದ್ರಸ್ವಾಮಿ, ಎಸ್.ಆರ್ ಶ್ರೀನಿವಾಸ್, ವಿನಯ್ ಕುಲಕರ್ಣಿ, ಶ್ರೀನಿವಾಸ್ ಮಾನೆ, ಹೆಚ್.ಸಿ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!