ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿ ಬಿಡುಗಡೆ: ಬೆಂಗಳೂರಿಗೆ ಯಾವ ಸ್ಥಾನ?

214

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯನ್ನು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ಸ್ ವರ್ಲ್ಡ್ ವೈಟ್ ಕಾಸ್ಟ್ ಆಫ್ ಲಿವಿಂಗ್ ಸಮೀಕ್ಷೆ ಬಿಡುಗಡೆಗೊಳಿಸಿದೆ. ನ್ಯೂಯಾರ್ಕ್ ಹಾಗೂ ಸಿಂಗಾಪುರ್ ವಾಸಿಸಲು ಅತ್ಯಂತ ದುಬಾರಿ ನಗರಗಳಾಗಿವೆ. ಈ ಎರಡು ನಗರಗಳು ಜಂಟಿಯಾಗಿ ಮೊದಲ ಸ್ಥಾನದಲ್ಲಿವೆ.

172 ಪ್ರಮುಖ ನಗರಗಳ ಜೀವನ ವೆಚ್ಚ ಕೆಳೆದ ವರ್ಷಕ್ಕಿಂತ ಶೇಕಡ 8.1ರಷ್ಟು ಹೆಚ್ಚಾಗಿದೆ. ಟೆಲ್ ಅವೀವ್(ಇಸ್ರೇಲ್) 3ನೇ ಸ್ಥಾನ, ಹಾಂಗ್ ಕಾಂಗ್( ಚೀನಾ) 4ನೇ ಸ್ಥಾನ, ಲಾಸ್ ಏಂಜಲೀಸ್(ಯುಎಎಸ್) 5ನೇ ಸ್ಥಾನ್, ಜ್ಯೂರಿಚ್(ಸ್ವಿಟ್ಜರ್ಲೆಂಡ್) 6ನೇ ಸ್ಥಾನ, ಜಿನೀವಾ(ಸ್ವಿಟ್ಜರ್ಲೆಂಡ್) 7ನೇ ಸ್ಥಾನ, ಸ್ಯಾನ್ ಫ್ರಾನ್ಸಿಸ್ಕೋ(ಯುಎಸ್) 8ನೇ ಸ್ಥಾನ, ಪ್ಯಾರಿಸ್(ಫ್ರಾನ್ಸ್) 9ನೇ ಸ್ಥಾನ ಹಾಗೂ ಕೋಪನ್ ಹ್ಯಾಗನ್(ಡೆನ್ಮಾರ್ಕ್) 10 ನೇ ಸ್ಥಾನದಲ್ಲಿವೆ.

ಇನ್ನು ಭಾರತದ ಮೂರು ನಗರಗಳು ಲಿಸ್ಟ್ ನಲ್ಲಿವೆ. ಸಿಲಿಕಾನ್ ಸಿಟಿ ಬೆಂಗಳೂರು(ಕರ್ನಾಟಕ) 161ನೇ ಸ್ಥಾನದಲ್ಲಿದೆ. ಚೆನ್ನೈ(ತಮಿಳುನಾಡು)164 ಹಾಗೂ ಅಹಮದಾಬಾದ್(ಗುಜರಾತ್) 165ನೇ ಸ್ಥಾನದಲ್ಲಿವೆ.




Leave a Reply

Your email address will not be published. Required fields are marked *

error: Content is protected !!