ಸಿಂದಗಿಯಲ್ಲಿ ಅತಿಯಾದ ಲೋಡ್ ಶೆಡ್ಡಿಂಗ್

330

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದಲ್ಲಿ ಕಳೆದೊಂದು ವಾರದಿಂದ ಅತಿಯಾದ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಇದರಿಂದಾಗಿ ನಿವಾಸಿಗಳು, ಅಂಗಡಿಕಾರರು ಸೇರಿದಂತೆ ಪ್ರತಿಯೊಬ್ಬರು ಸಮಸ್ಯೆ ಎದುರಿಸುತ್ತಿದ್ದಾರೆ.

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯಾಗುವುದು ಸಹಜ. ಆದರೆ, ಪ್ರತಿ ಬಾರಿಯೂ ಏಳೆಂಟು ಗಂಟೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಕೆಲವೊಮ್ಮೆ ರಾತ್ರಿ ಕಡಿತವಾದ ವಿದ್ಯುತ್ ಮರುದಿನ ಮಧ್ಯಾಹ್ನದವರೆಗೂ ಬರುವುದಿಲ್ಲ. ಕೆಇಬಿ ಸಿಬ್ಬಂದಿಗೆ ಕೇಳಿದರೆ ಬಾಗೇವಾಡಿ ಮೇನ್ ಸಂಪರ್ಕ ಕೇಂದ್ರದಲ್ಲೇ ಸಮಸ್ಯೆ ಅನ್ನೋದು ಪ್ರತಿ ಬಾರಿಯ ಮಾತಾಗಿದೆ. ಹೀಗಾಗಿ ಕೆಇಬಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!