ಸುಶಾಂತ ಮಾಜಿ ಗೆಳತಿ ಜೊತೆ ನಿರ್ದೇಶಕ ಮಹೇಶ ಭಟ್ ಸಂಬಂಧ?

412

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಆತ್ಮಹತ್ಯೆಯ ಪ್ರಕರಣ ಹಲವು ತಿರುವುಗಳನ್ನ ಪಡೆದುಕೊಳ್ತಿದೆ. ಇದರಲ್ಲಿ ಅನೇಕ ದಿಗ್ಗಜ ನಟರು, ನಿರ್ದೇಶಕರ ಹೆಸರುಗಳು ತಳಕು ಹಾಕಿಕೊಂಡಿವೆ. ಇದೀಗ ಮತ್ತೊಂದು ವಿಷ್ಯ ಅಂದ್ರೆ, ಸುಶಾಂತ ಮಾಜಿ ಗೆಳತಿ ರಿಯಾ ಚಕ್ರಬೊರ್ತಿ ಹಾಗೂ ನಿರ್ದೇಶಕ ಮಹೇಶ ಭಟ್ ಜೊತೆ ಸಂಬಂಧವಿತ್ತು ಅಂತಾ ಹೇಳ್ತಿರುವುದು.

ನಿರ್ದೇಶಕ ಮಹೇಶ ಭಟ್ ಅಣತಿಯಂತೆ ರಿಯಾ ನಡೆದುಕೊಳ್ತಿದ್ಳಂತೆ. ಸುಶಾಂತ ಸಾವಿಗೂ ಕೆಲ ದಿನಗಳ ಮೊದ್ಲು ರಿಯಾ ಅವನೊಂದಿಗೆ ಜಗಳ ಮಾಡಿಕೊಂಡು ದೂರವಾಗಿದ್ದು ಸಹ ಮಹೇಶ ಭಟ್ ಸಲಹೆ ಮೇರೆಗೆ ಎಂದು ಹೇಳಲಾಗ್ತಿದೆ. ಹೀಗಾಗಿ ಮಹೇಶ ಭಟ್ ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

2018-19ರ ನಡುವೆ ಎರಡು ಬಾರಿ ಸುಶಾಂತನನ್ನ ಭೇಟಿಯಾಗಿರುವುದಾಗಿ ಹೇಳಿರುವ ಮಹೇಶ ಭಟ್, ಜಲೇಬಿ ಚಿತ್ರದಲ್ಲಿ ರಿಯಾ ನಟನೆ ಮಾಡ್ತಿರುವ ಟೈಂನಲ್ಲಿ ಒಮ್ಮೆ ಭೇಟಿಯಾಗಿರುವುದಾಗಿ ಹೇಳಿದ್ದಾರೆ. ನನ್ನ ಹಾಗೂ ರಿಯಾ ನಡುವಿನ ಸಂಬಂಧದ ಮಾತು ಸುಳ್ಳು ಎಂದಿರುವ ಮಹೇಶ ಭಟ್, ರಿಯಾ ನನ್ನನ್ನ ಗುರು ಎಂದು ತಿಳಿದುಕೊಂಡಿದ್ದಳು ಎಂದಿದ್ದಾರೆ.

ಇನ್ನು 1991ರಲ್ಲಿ ಬಂದ ಸಡಕ್ ಚಿತ್ರದ ಸೀಕ್ವೆಲ್ ನಲ್ಲಿ ರಿಯಾ ಅಥವ ಸುಶಾಂತನನ್ನ ಹಾಕಿಕೊಂಡು ಸಿನಿಮಾ ಮಾಡುವ ಕುರಿತು ಚರ್ಚೆ ನಡೆಸಿಲ್ಲ ಎಂದಿದ್ದಾರೆ. ಹೀಗೆ ಪೊಲೀಸರ ವಿಚಾರಣೆ ವೇಳೆ ನಿರ್ದೇಶಕ ಮಹೇಶ ಭಟ್ ಕೆಲ ವಿಚಾರಗಳನ್ನ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!