ಪ್ರಜಾಸ್ತ್ರ ಸುದ್ದಿ
ವಿಜಯಪುರ: ಮನುಷ್ಯ, ಪ್ರಾಣಿ, ಪಕ್ಷಿ ಸಂಕುಲ ಸೇರಿದಂತೆ ಪ್ರಕೃತಿ ಎಲ್ಲ ಕಾಲಕ್ಕೂ ಉಳಿಯಬೇಕು ಹಾಗೂ ಅದು ಸತ್ವಯುತವಾಗಿ ಇರಬೇಕು ಅಂದರೆ ಮಣ್ಣಿನ ಪಾತ್ರ ಬಹುಮುಖ್ಯವಾಗಿದೆ. ಆದರೆ, ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಮಣ್ಣಿನ ಸತ್ವ ಕಳೆದುಕೊಳ್ಳುತ್ತಿದೆ. ಅದು ಹೇಗೆ ಅನ್ನೋದರ ಕುರಿತು ತಿಳಿಸಿಕೊಡುವ ತುಂಬಾ ವಿಭಿನ್ನವಾದ ‘ಮಣ್ಣಿನೊಂದಿಗೆ ಮಾತುಕತೆ’ ಅನ್ನೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಿಲ್ಲೆಯ ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಮಾದರಿ ರೈತ ಗುರುರಾಜ ಪಡಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಸಾವಯವ ಕೃಷಿ ಸೇರಿದಂತೆ ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಗಣ್ಯರು ಮಣ್ಣಿನ ಕುರಿತು ಮಾತನಾಡಲಿದ್ದಾರೆ. ಇದರ ಒಂದು ಪ್ರಯೋಜನವನ್ನು ರೈತರು ಹಾಗೂ ಸಾರ್ವಜನಿಕರು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಯಾರೆಲ್ಲ ಇರುತ್ತಾರೆ ಅನ್ನೋದು ಇಲ್ಲಿದೆ ನೋಡಿ..
