ಮಿನಿ ವಿಧಾನಸೌಧ ಹೆಸರು ಬದಲಾಯಿಸಲು ಸುತ್ತೋಲೆ

421

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ಕಚೇರಿ ಸೇರಿದಂತೆ ಇತರೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನು ಮಿನಿ ವಿಧಾನಸೌಧ ಎಂದು ಕರೆಯಲಾಗುತ್ತಿದೆ. ಅದನ್ನು ಬದಲಾಯಿಸಲು ಸುತ್ತೋಲೆ ಹೊರಡಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಮಿನಿ ವಿಧಾನಸೌಧ ಅನ್ನೋ ಹೆಸರು ಬದಲಾಯಿಸಲು ಕೋರಿಕೊಂಡಿದ್ದಾರೆ. ಇಲ್ಲಿ ಯಾವುದೇ ಕಲಾಪಗಳು ನಡೆಯಲ್ಲ. ಕಾಯ್ದೆ, ಕಾನೂನು ರೂಪಿಸಲ್ಲ. ಅಲ್ಲದೇ ಮಿನಿ ಅನ್ನೋದು ಆಂಗ್ಲ ಪದವಾಗಿದೆ. ಈ ಎಲ್ಲ ಕಾರಣಗಳಿಂದ ‘ತಾಲೂಕು ಆಡಳಿತ ಸೌಧ’ ಎಂದು ಬದಲಾಯಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!