ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಆರು ತಿಂಗಳು ಆಗುತ್ತಾ ಬಂದಿದೆ. ಆಗಲೇ ಶಾಸಕರ ಖರೀದಿ ರಾಜಕೀಯ ನಡೆದಿದೆ. ಪ್ರತಿಯೊಂದು ಪಕ್ಷದ ನಾಯಕರು ನಮ್ಮ ಹತ್ತಿರ ಇಷ್ಟು ಶಾಸಕರು ಲಿಸ್ಟ್ ಇದೆ. ಇಷ್ಟು ಜನರು ನಮ್ಮೊಂದಿಗೆ ಬರುತ್ತಿದ್ದಾರೆ ಎನ್ನುತ್ತಿದ್ದಾರೆ.
136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ 5 ವರ್ಷ ಭರ್ಜರಿ ಸರ್ಕಾರ ನಡೆಸಬೇಕು ಎನ್ನುವ ಹೊತ್ತಿನಲ್ಲಿಯೇ ಆಂತರಿಕ ಕಚ್ಚಾಟಗಳ ಜೊತೆಗೆ ವಿಪಕ್ಷಗಳ ರಣತಂತ್ರಕ್ಕೆ ಸುಸ್ತಾಗುತ್ತಿದೆ. 66 ಶಾಸಕರನ್ನು ಹೊಂದಿರುವ ಬಿಜೆಪಿ, 19 ಶಾಸಕರನ್ನು ಹೊಂದಿರುವ ಜೆಡಿಎಸ್ ಒಂದಾಗಿದ್ದು, ಕೈ ಪಾಳೆಯದಲ್ಲಿ ಒಂದಿಷ್ಟು ಟೆನ್ಷನ್ ಮೂಡಿಸಿದೆ. ಆದರೂ, ತೋರಿಸದೆ ವಾಗ್ದಾಳಿ ನಡೆಸಲಾಗುತ್ತಿದೆ.
ಹಾಸನಾಂಬಾ ದೇವಿಯ ದರ್ಶನದ ನೆಪದಲ್ಲಿ ಜೆಡಿಎಸ್ ಶಾಸಕರ ಸಭೆಯನ್ನು ನಡೆಸಿದೆ. ಮತ್ತೊಂದು ಸಿಎಂ ಸಿದ್ದರಾಮಯ್ಯ ಟಿಫನ್ ನೆಪದಲ್ಲಿ ಶಾಸಕರೊಂದಿಗೆ ಚರ್ಚೆ ಮಾಡಿದ್ದಾರೆ. ಬಿಜೆಪಿ ಮತ್ತೊಂದು ಲೋಕದಲ್ಲಿ ಮುಳುಗಿದೆಯಂತೆ ಕಂಡರೂ ಸರ್ಕಾರ ಬೀಳಸಲು ಒಳಗೊಳಗೆ ಕಸರತ್ತು ನಡೆಸಿದೆ. ಹೀಗಾಗಿ ಕೈ ನಾಯಕರಲ್ಲಿ ಟೆನ್ಷನ್ ಇದೆ. ಶಾಸಕರ ಖರೀದಿ ರಾಜಕೀಯ ಜೋರಾಗಿದೆ. ಯಾವ ಪಕ್ಷದ ಶಾಸಕರು, ಮಾಜಿ ಶಾಸಕರು ಯಾವ ಪಾರ್ಟಿ ಸೇರ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.