ಮೋದಿಯ ಶುಭ‘ಮೇ’ಳ ರಹಸ್ಯ!

564

ಬಿಜೆಪಿಯ ಶೇರ್ ನರೇಂದ್ರ ಮೋದಿ 350 ನಾಟ್ ಔಟ್. ರಾಕ್ಷಸ ಗೆಲುವಿನ ಮೋದಿ ಮೇ 26ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಿದ್ದಾರೆ. ಮೇ ತಿಂಗಳಿಗೂ ಮೋದಿಗೂ ಇರುವ ನಂಟಿನ ರಹಸ್ಯ ಇಲ್ಲಿದೆ..

ಮತದಾನೋತ್ತರ ಸಮೀಕ್ಷೆಗಳೆಲ್ಲವನ್ನ ಉಡೀಸ್ ಮಾಡಿದ ಬಿಜೆಪಿ, ಭಾರತದ ಭೂಪಟದಲ್ಲಿ ಹೊಸ ದಾಖಲೆ ಬರೆದಿದೆ. ಈ ಹಿಂದೆ ಇಂದಿರಾ ಮಾಡಿದ್ದ ಸಾಧನೆಯನ್ನ ಈಗ ಮೋದಿ ಮಾಡಿದ್ದಾರೆ. 1967 ಗೆದ್ದಿದ್ದ ಇಂದಿರಾ ಗಾಂಧಿ, 1971ರಲ್ಲಿ ಮಧ್ಯಂತರ ಚುನಾವಣೆ ಎದುರಿಸಿ ಭರ್ಜರಿ 352 ಸೀಟ್ ಗಳನ್ನ ಪಡೆದಿದ್ದರು. ಇದೇ ರೀತಿ ಕಳೆದ ಬಾರಿ ಬಿಜೆಪಿ 282 ಸ್ಥಾನಗಳನ್ನ ಪಡೆದಿದ್ದು, ಇದೀಗ ಅದು ಮುನ್ನೂರರ ಗಡಿ ದಾಟಿದೆ. ಇಷ್ಟೆಲ್ಲ ಸಾಧನೆ ಮಾಡಿರೋ ಮೋದಿಗೂ ಮೇ ತಿಂಗಳ ನಂಟಿದೆ.

ಹೌದು, ನಿಮ್ಮನ್ನ ಐದು ವರ್ಷ ಹಿಂದಕ್ಕೆ ಕರೆದುಕೊಂಡು ಹೋಗ್ತೀವಿ. ಕಳೆದ ಬಾರಿ ಮೋದಿ ಮೊದಲ ಬಾರಿಗೆ ಪ್ರಧಾನಿ ಅಧಿಕಾರಿ ವಹಿಸಿಕೊಂಡಿದ್ದು ಮೇ 26 ರಂದು. ಇದೀಗ ಮತ್ತೊಮ್ಮೆ ಪ್ರಧಾನಿಯಾಗಿರುವ ನಮೋ, ಅದೇ ಮೇ 26ರಂದು ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ದಾರೆ. 2014 ಮೇ 16 ರಂದು ಗುಜರಾತ್ ವಿಧಾನಸಭಾದಿಂದ ನೇರವಾಗಿ ಲೋಕಸಭೆಗೆ ಸ್ಪರ್ಧೆ. ಮೇ 22 ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ, ಮೇ 26ರಂದು ದೇಶದ 14ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ತಾರೆ.

ಮೇ ತಿಂಗಳಿಗೂ ಪ್ರಧಾನಿ ಮೋದಿಗೆ ಲಕ್ಕಿ ನಂಟಿದೆ. ತಮ್ಮ ಸರ್ಕಾರದ ಅನೇಕ ಮಹತ್ವದ ಕಾರ್ಯಕ್ರಮಗಳಿಗೆ ಡೇಟ್ ಫಿಕ್ಸ್ ಮಾಡೋದು ಮೇ ತಿಂಗಳಲ್ಲಿ. ಭಾರತದ ಅತೀ ದೊಡ್ಡ ಡೋಲಾ ಸಾದಿಯಾ ಸುತುವೆ ಲೋಕಾರ್ಪಣೆ ಮಾಡಿದ್ದು ಮೇ 26, 2018. ನರೇಂದ್ರ ಮೋದಿ ಅವರ ಬೃಹತ್ ಸಮಾವೇಶ, ರ್ಯಾಲಿಗಳು ನಡೆಯೋದು ಅತೀ ಹೆಚ್ಚಾಗಿ ಮೇ ತಿಂಗಳಲ್ಲಿ. ಅವರು ಇಲ್ಲಿಯವರೆಗೂ ಮಾಡಿರುವ ವಿದೇಶ ಪ್ರವಾಸಗಳಲ್ಲಿ 12 ಬಾರಿ ಮೇ ತಿಂಗಳಲ್ಲಿ ಮಾಡಿದ್ದಾರೆ.

ಮೋದಿ ಸರ್ಕಾರ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ 2015, ಮೇ ತಿಂಗಳಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದಕ್ಕೂ ಕೆಲ ದಿನಗಳ ಮೊದ್ಲು ಅವರಿಗೆ ಹತ್ಯೆಯ ಸಂದೇಶ ಬಂದಿದ್ದು ಮೇ ತಿಂಗಳಲ್ಲಿಯೇ. ಆ ವ್ಯಕ್ತಿ ಬಂಧಿಸುವ ಮೂಲಕ ದೊಡ್ಡ ಗಂಡಾಂತರ ತಪ್ಪಿತು. ಇನ್ನು ಭೋಪಾಲ್ ನಲ್ಲಿ ಚುನಾವಣೆಯ ಕೊನೆಯ ಬೃಹತ್ ಸಮಾವೇಶ ನಡೆದಿದ್ದು ಮೇ 18. ಆಗ್ಲೇ ಅವರು 300ರ ಗಡಿ ದಾಟುವುದಾಗಿ ಹೇಳಿದ್ದರು.

ಇದು ಮೇ ತಿಂಗಳು ಮತ್ತು ಮೋದಿಗಿರುವ ನಂಟು. ಈ ತಿಂಗಳು ಮತ್ತು ನಂಬರ್ ಮೋದಿಗೆ ಲಕ್ಕಿ. ಹೀಗಾಗಿ ಅವರ ಬಹುತೇಕ ಕಾರ್ಯಕ್ರಮಗಳು ನಡೆಯೋದು ಇದೇ ತಿಂಗಳಲ್ಲಿ. ಇದೀಗ ಮೇ 26ಕ್ಕೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ 2ನೇ ಬಾರಿಗೆ ದಿಲ್ಲಿ ದರ್ಬಾರ್ ನಡೆಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!