ಮೊಹರೆ ಪ್ರತಿಮೆ, ಗ್ರಂಥಾಲಯಕ್ಕಾಗಿ ಸಿದ್ಧವಾಯ್ತು ಹೊಸ ತಂಡ

806

ಪ್ರಜಾಸ್ತ್ರ ವಿಶೇಷ

ದೇವರಹಿಪ್ಪರಗಿ: ಮೊಹರೆ ಹಣಮಂತರಾಯ ಅವರ ವೃತ್ತಕ್ಕೆ ಸಂಬಂಧಿಸಿದಂತೆ ವಿಶೇಷ ವರದಿ ಪ್ರಕಟವಾಗಿತ್ತು. ಇದೀಗ ಅದರ ಮುಂದುವರೆದ ಭಾಗ ಇದಾಗಿದ್ದು, ಮೊಹರೆ ಜನ್ಮಶತಾಬ್ದಿಯಲ್ಲಿ ಸಲ್ಲಿಸಿದ ಮನವಿ ಇಂದಿಗೂ ಈಡೇರಿಲ್ಲ. 1989ರಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಆರ್.ಬಿ ಚೌಧರಿ ಅವರು, ಮೊಯ್ಲಿ ಸಂಪುಟದಲ್ಲಿ ಸಚಿವರಾಗಿದ್ರು. ಇವರ ಸಮಯದಲ್ಲಿ ಮೊಹರೆ ಅವರ ಪ್ರತಿಮೆ ನಿರ್ಮಾಣ ಸಂಬಂಧ ಮನವಿ ಸಲ್ಲಿಸಲಾಗಿತ್ತು.

ಮೊಹರೆ ಹಣಮಂತರಾಯ ಅವರ ಜನ್ಮಶತಾಬ್ದಿ ಕಾರ್ಯಕ್ರಮದ ಸಂದರ್ಭ

ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ, ಡಾ.ಮೈಸೂರಮಠ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಂದಿನ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿಯಲ್ಲಿ ಮೊಹರೆ ಅವರ ಪುತ್ಥಳಿ ನಿರ್ಮಾಣ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಆದ್ರೆ, ಇಚ್ಛಾಶಕ್ತಿ ಕೊರತೆಯಿಂದ ಕೆಲಸ ನೆನಗುದಿಗೆ ಬಿದ್ದಿದೆ ಎಂದು ಬಿ.ಕೆ ಪಾಟೀಲರು ಬೇಸರ ವ್ಯಕ್ತಪಡಿಸ್ತಾರೆ.

ಇದೀಗ ವಿಜಯಪುರ ಜಿಲ್ಲೆ ಸೇರಿದಂತೆ ನಾಡಿನ ಬೇರೆ ಬೇರೆ ಭಾಗದಲ್ಲಿರುವ ಹಿರಿಯ ಪತ್ರಕರ್ತರು, ಸಾಹಿತಿಗಳು, ಸಮಾನ ಮನಸ್ಕರು ಸೇರಿಕೊಂಡು ಹೊಸ ಬಳಗ ಸಿದ್ಧವಾಗಿದೆ. ಮೊಹರೆ ಹುಟ್ಟೂರಾದ ದೇವರಹಿಪ್ಪರಗಿಯಲ್ಲಿ ಪ್ರತಿಮೆ ಹಾಗೂ ಪತ್ರಿಕಾ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳ ಗಮನಕ್ಕೆ ತಂದು, ನೆನಗುದಿಗೆ ಬಿದ್ದಿರುವ ಕೆಲಸವನ್ನ ಶುರು ಮಾಡಿ ನಾಡಿನ ಪತ್ರಿಕಾರಂಗದ ದಿಗ್ಗಜನ ಹೆಸರು ಶಾಶ್ವತವಾಗಿರಲು ಮುಂದಾಗಿರುವುದು ಶ್ಲಾಘನೀಯ.




Leave a Reply

Your email address will not be published. Required fields are marked *

error: Content is protected !!