ರಿಮ್ಸ್ ಆಸ್ಪತ್ರೆ ರೋಗಿಗಳಿಗೆ ಕೋತಿಗಳ ಕಾಟ

74

ಪ್ರಜಾಸ್ತ್ರ ಸುದ್ದಿ

ರಾಯಚೂರು: ಇಲ್ಲಿನ ರಿಮ್ಸ್ ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು, ಅವರ ಸಂಬಂಧಿಕರು ಬರುತ್ತಾರೆ. ಒಂದು ಕಡೆ ಅನಾರೋಗ್ಯದ ಸಮಸ್ಯೆ ಇದ್ದರೆ, ಮತ್ತೊಂದು ಕಡೆ ಕೋತಿಗಳ ಕಾಟ ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಬಡ ರೋಗಿಗಳು ಆಸ್ಪತ್ರೆಗೆ ಬರುವುದು ಕಷ್ಟವಾಗುತ್ತಿದೆ.

ಮೊದಲಿನಿಂದಲೂ ಇಲ್ಲಿ ಕೋತಿಗಳ ಕಾಟವಿದೆ. ಈ ಬಗ್ಗೆ ಆಸ್ಪತ್ರೆಗೆ ಸಿಬ್ಬಂದಿ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಅಂತಿದ್ದಾರೆ ಸಾರ್ವಜನಿಕರು. ಆಸ್ಪತ್ರೆ ಒಳಗೆ ಬರುವ ಕೋತಿಗಳು ಜನರ ಮೇಲೆ ದಾಳಿ ಮಾಡುವ ಭಯ ಮೂಡಿದೆ. ಹೀಗಾಗಿ ಬ್ರೆಡ್, ಹಣ್ಣು, ಹಾಲು, ಊಟ, ತಿಂಡಿ ತೆಗೆದುಕೊಂಡು ಹೋದರೂ ಸುಮ್ಮನೆ ಇರಬೇಕಾದ ಪರಿಸ್ಥಿತಿ ಇದೆ.

ಇಲ್ಲಿಗೆ ಬರುವ ಜನರು ಊಟ, ತಿಂಡಿ ಆದ ಮೇಲೆ ಎಲ್ಲೆಂದರಲ್ಲಿ ಬಿಸಾಕುವುದರಿಂದ ಕೋತಿಗಳು ಇಲ್ಲಿಗೆ ಬರುತ್ತಿವೆ. ಮೊದಲಿನಷ್ಟು ಈಗ ಅಲ್ಲ. ಹತೋಟಿಗೆ ತರಲಾಗಿದೆ. ಅರಣ್ಯ ಇಲಾಖೆಗೆ ತಿಳಿಸಿದರೂ ಅವರು ಬರುತ್ತಿಲ್ಲ ಅನ್ನೋದು ಆಸ್ಪತ್ರೆಯವರ ಮಾತು. ಒಟ್ಟಿನಲ್ಲಿ ಕೋತಿಗಳ ಕಾಟಕ್ಕೆ ಆಸ್ಪತ್ರೆಗೆ ಬರುವ ಜನರು ರೋಸಿ ಹೋಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!