ಅಗಲಿದ ಗಣ್ಯರಿಗೆ ಸಂತಾಪ: 1 ಗಂಟೆ ಮುಂದೂಡಿದ ಕಲಾಪ

277

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ಭೀತಿ ನಡುವೆ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಕಲಾಪ ಆರಂಭವಾಗಿದೆ. ಮೊದ್ಲು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಬಳಿಕ 1 ಗಂಟೆ ಕಾಲ ಕಲಾಪವನ್ನ ಮುಂದೂಡಲಾಯ್ತು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಂಗೀತ ದಿಗ್ಗಜ ಪಂಡಿತ ಜಸ್ತಾಜ್, ಛತ್ತೀಸಗ ಮಾಜಿ ಸಿಎಂ ಅಜಿತ ಯೋಗಿ, ಉತ್ತರ ಪ್ರದೇಶ ಸಚಿವೆಯಾಗಿದ್ದ ಕಮಲ ರಾಣಿ, ಚೇತನ ಚೌಹ್ಹಾಣ, ಮಧ್ಯಪ್ರದೇಶ ರಾಜ್ಯಪಾಲರಾಗಿದ್ದ ಲಾಲ್ಜಿ ಟಂಡನ್, ಕೇಂದ್ರ ಮಾಜಿ ಸಚಿವ ಡಾ.ರಘುವಂಶ ಪ್ರಸಾದ ಸಿಂಗ್ ಸೇರಿದಂತೆ ಈ ವರ್ಷ ಮೃತಪಟ್ಟ ಗಣ್ಯರಿಗೆ ಗೌರವ ನಮನ ಸಲ್ಲಿಸಲಾಯ್ತು.

ಕೋವಿಡ್ 19 ಹಿನ್ನೆಲೆಯಲ್ಲಿ ಮಾಜಿ ಸಂಸದರು, ರಾಜ್ಯಸಭಾ ಸದಸ್ಯರು, ಖಾಸಗಿ ಕಾರ್ಯದರ್ಶಿಗಳು, ಸಹಾಯಕರು, ಕುಟುಂಬಸ್ಥರು ಹಾಗೂ ಖಾಸಗಿ ಅತಿಥಿಗಳನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!