‘ವಿಜಯ’ಪುರದ ಸರದಾರ…

891

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಪಡೆದು, ದಾಖಲೆ ನಿರ್ಮಿಸಿದ ಕೇಂದ್ರ ಸಚಿವ, ಸಂಸದ ರಮೇಶ ಜಿಗಜಿಣಗಿ ಅವರೊಂದಿಗೆ ‘ಪ್ರಜಾಸ್ತ್ರ’ ನಡೆಸಿದ ಸಂದರ್ಶನ ಇಲ್ಲಿದೆ…

ನಾಗೇಶ: ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದೀರಿ. ಹೇಗೆ ಅನಿಸುತ್ತಿದೆ.

ರಮೇಶ ಜಿಗಜಿಣಗಿ : ಇದೇನು ಹೊಸದೇನಲ್ಲ. ಹಿಂದೆ ಕೂಡ ಚಿಕ್ಕೋಡಿಯಿಂದ ಮೂರು ಬಾರಿ ಗೆಲ್ಲಿಸಿ ಹ್ಯಾಟ್ರಿಕ್ ಮಾಡಿ ಕಳುಹಿಸಿದ್ರು. ವಿಜಯಪುರಕ್ಕ ಬಂದ ಮೇಲೆ ಇವರೂ ಹ್ಯಾಟ್ರಿಕ್ ಗೆಲುವು ಕೊಟ್ಟು, ಭದ್ರವಾದ ಗೋಡೆ ಕಟ್ಟಲು ಕಾರಣಿಭೂತರಾಗಿದ್ದಾರ. 11 ಚುನಾವಣೆಯನ್ನ ಎದುರಿಸಿ ಗೆದ್ದಿದ್ದೇನೆ. ಇದು ಜನರ ಗೆಲುವು.

  • ನಾಗೇಶ: ಈ ಹಿಂದಿನ ನಿಮ್ಮ ರೆಕಾರ್ಡ್ ನೀವೇ ಬ್ರೇಕ್ ಮಾಡಿ 6 ಲಕ್ಷದ 35 ಸಾವಿರದ 867 ಮತಗಳನ್ನ ಪಡೆಯಲು ಹೇಗೆ ಸಾಧ್ಯವಾಯ್ತು?

ರಮೇಶ ಜಿಗಜಿಣಗಿ: 6 ಬಾರಿ ಲೋಕಸಭೆ ಚುನಾವಣೆಗೆ ನಿಂತಿದ್ದೇನೆ. ಇಷ್ಟೊಂದು ವೋಟ್ ಬಂದಿದ್ದು ಇದು ಮೊದಲನೇ ಸಾರಿ. ಇದಕ್ಕೆ ಕಾರಣ ಏನಪ್ಪ ಅಂದ್ರ, ವಿರೋಧ ಪಕ್ಷದವರು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರು. ಜನರು ಅದರ ಪ್ರತಿರೂಪವಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವೋಟ್ ಹಾಕಿದ್ರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ
  • ನಾಗೇಶ: ಬಿ.ಕೆ ಗುಡದಿನ್ನಿ ಅವರ ದಾಖಲೆ ಮುರಿದು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದೀರಿ..

ರಮೇಶ ಜಿಗಜಿಣಗಿ: ಹ್ಞಂ.. ಹ್ಯಾಟ್ರಿಕ್ ಗೆಲುವು..

  • ನಾಗೇಶ: ನಿಮ್ಮ ಪ್ರತಿಸ್ಪರ್ಧಿ ಡಮ್ಮಿ ಅನ್ನೋ ಕಾರಣಕ್ಕೆ ನಿಮ್ಮ ಗೆಲುವಿನ ಮತಗಳ ಅಂತರ ಹೆಚ್ಚಿಗೆ ಆಗಲು ಕಾರಣವಾಯ್ತಾ?


ರಮೇಶ ಜಿಗಜಿಣಗಿ: ಇಲ್ಲಪ್ಪ.. ಇಲ್ಲಪ್ಪ.. ಡಮ್ಮಿ ಮತ್ತೊಂದು ಮಗದೊಂದು ಏನೂ ಇಲ್ಲ. ಹೆಚ್ಚಿಗೆ ಆಗಕ್ಕ ಕಾರಣ ಏನಪ್ಪ ಅಂದ್ರ, ಕುಮಾರಸ್ವಾಮಿ ಅವರು ಕಾಂಗ್ರೆಸ್ ನವರು ಅಧಿಕಾರ ಹಂಚಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಆದರು. ಜನತಾದಳದವರು, ಕಾಂಗ್ರೆಸ್ ನವರು ನಾವು ಮುಖ್ಯಮಂತ್ರಿಗಳು ಆಗಿದ್ದೀವಿ ರಾಜ್ಯದಲ್ಲಿ, ನೀವು ಒಬ್ಬರಿಗೊಬ್ಬರು ಕಿತ್ಯಾಡಬ್ಯಾಡ್ರಿ ಅಂತ ಹೇಳಿದ್ರೂ ಕೂಡ ಅದೇನ್ ಆಗ್ಲಿಲ್ಲ. ಯಾಕಂದ್ರ, ಅದು ಜನತಾದಳ ಕಾಂಗ್ರೆಸ್ ನ ವಿರೋಧವಾಗಿ ಬೆಳದದ್ದು. ನಿಮಗ ಕುರ್ಚಿ ಸಿಗ್ತದ ಅಂತಾ ಹೊಂದಾಣಿಕೆ ಮಾಡಿಕೊಂಡ್ರ, ಕಾರ್ಯಕರ್ತರು ಹೊಂದಾಣಿಕೆಯಾಗಬೇಕಲ್ಲ. ಇದು ಪ್ರಮುಖವಾದದ್ದು. ಅಭ್ಯರ್ಥಿ ಬಗ್ಗೆ ಏನಲ್ಲ. ಅವರಿಗೆ ಏನ್ ರಾಜಕೀಯ ಅನುಭವ ಇದೆ ಹೇಳಿ. ಈ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಇದು ಬರೀ ಇದೇ ಕ್ಷೇತ್ರ ಅಲ್ಲ. ಇಡೀ ರಾಜ್ಯದ ತುಂಬಾ ಇದೆ.

  • ನಾಗೇಶ: ಈ ಬಾರಿ ಕೇಂದ್ರದಲ್ಲಿ ಮತ್ತೆ ನೀವು ಮಂತ್ರಿ ಆಗುವ ಸಾಧ್ಯತೆ ಇದೆಯಾ?

ರಮೇಶ ಜಿಗಜಿಣಗಿ: ಇದರ ಬಗ್ಗೆ ನಾನು ಏನು ಹೇಳೋದಿಲ್ಲ. ಅದು ನಮ್ಮ ನಾಯಕರಿಗೆ, ಪಕ್ಷಕ್ಕೆ ಬಿಟ್ಟಿದ್ದು.




Leave a Reply

Your email address will not be published. Required fields are marked *

error: Content is protected !!