ಈಕೆ ಮೊಬೈಲ್ ನಲ್ಲಿದ್ವು ನೂರಾರು ನರ್ಸ್ ಗಳ ಬೆತ್ತಲೆ ವಿಡಿಯೋ

565

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಹೆಣ್ಮಕ್ಕಳು ಸ್ನಾನ ಮಾಡುವುದನ್ನ, ಬಟ್ಟೆ ಬದಲಾಯಿಸುವುದನ್ನ ಕದ್ದುಮುಚ್ಚಿ ಮೊಬೈಲ್ ಕ್ಯಾಮೆರಾದಲ್ಲಿ ಗಂಡ್ಮಕ್ಕಳು ಶೂಟ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುವುದು ಸಾಮಾನ್ಯವಾಗಿದೆ. ಆದ್ರೆ, ಇಲ್ಲೊಬ್ಬಳು ಸಹದ್ಯೋಗಿ ನರ್ಸ್ ಗಳ ಬೆತ್ತಲೆ ವಿಡಿಯೋ ಮಾಡ್ತಿರುವುದು ಕಂಡು ಬಂದಿದೆ.

ವೈಟ್ ಫೀಲ್ಡ್ ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡ್ತಿರುವ ಅಶ್ವಿನಿ ಅನ್ನೋ ಮಹಿಳೆ, ತುರ್ತು ನಿಗಾ ಘಟಕದಲ್ಲಿ ಕೆಲಸ ಮಾಡುವವರಿಗೆ ಹಾಸ್ಟೆಲ್ ಸೌಲಭ್ಯ ನೀಡ್ತಿದ್ಳು. ಅದರ ಮೇಲ್ವಿಚಾರಿಕೆ ಜೊತೆಗೆ ನರ್ಸ್ ಆಗಿಯೂ ಕೆಲಸ ಮಾಡ್ತಿದ್ದ ಅಶ್ವಿನಿ, ಸಹದ್ಯೋಗಿ ನರ್ಸ್ ಗಳು ಸ್ನಾನಕ್ಕೆ ಹೋದಾಗ ಬೆತ್ತಲೆ ವಿಡಿಯೋ ಮಾಡ್ತಿರುವುದು ಕಳೆದ ಡಿಸೆಂಬರ್ 5ರಂದು ಬೆಳಕಿಗೆ ಬಂದಿದೆ.

ಅಶ್ವಿನಿಯನ್ನ ಆಂತರಿಕ ವಿಚಾರಣೆ ಮಾಡಲಾಗಿದೆ. ಅಲ್ದೇ, ಅವಳ ಮೊಬೈಲ್ ಪರಿಶೀಲನೆ ಮಾಡಿದಾಗ ನೂರಾರು ನರ್ಸ್ ಗಳ ಬೆತ್ತಲೆ ವಿಡಿಯೋ ಸಿಕ್ಕಿದ್ದು ಆಸ್ಪತ್ರೆ ಸಿಬ್ಬಂದಿಯೇ ಶಾಕ್ ಆಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಅಶ್ವನಿಯನ್ನ ಅವರದೆ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಹೀಗೆ ಕದ್ದುಮುಚ್ಚಿ ಮಡ್ತಿದ್ದ ಬೆತ್ತಲೇ ವಿಡಿಯೋವನ್ನ ತನ್ನ ಪ್ರಿಯಕರನಿಗೆ ನೀಡ್ತಿದ್ದೆ ಎಂದು ಹೇಳಿದ್ದಾಳೆ. ಇದೀಗ ಪ್ರಿಯಕರನ್ನ ವಶಕ್ಕೆ ಪಡೆದ ವಿಚಾರಣೆ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!