ನೇತಾಜಿ ಹುಟ್ಟು ಹಬ್ಬಕ್ಕೆ ಸಿಂದಗಿಯಲ್ಲಿ ಮ್ಯಾರಾಥಾನ್

338

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಜನವರಿ 23ರಂದು ವೀರ ಸ್ವತಂತ್ರ ಹೋರಾಟಗಾರ ನೇತಾಜಿ ಸುಭಾಷ ಚಂದ್ರ ಬೋಷ್ ಅವರ 125ನೇ ಜನುಮ ದಿನ. ದೇಶ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗ್ತಿದ್ದು, ಅದರಂತೆ ಸಿಂದಗಿಯಲ್ಲಿ ಅಂದು ಜೈ ಹಿಂದ್ ಮ್ಯಾರಾಥಾನ್ ನಡೆಸಲು ಯುವ ಬ್ರಿಗೇಡ್ ಮುಂದಾಗಿದೆ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ರಾಜು ಪಾಟೀಲ ತಿಳಿಸಿದ್ರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿದ ರಾಜು ಪಾಟೀಲ, ಜನವರಿ 23 ಶನಿವಾರ ಬೆಳಗ್ಗೆ 7 ಗಂಟೆಗೆ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ನಿಂದ ಹಳೆ ಬಜಾರ್ ಮಾರ್ಗವಾಗಿ ಬಸವೇಶ್ವರ ಸರ್ಕಲ್ ವರೆಗೆ ಮ್ಯಾರಾಥಾನ್ ನಡೆಸಲಾಗುವುದು. ಇದಕ್ಕೆ ಭೀಮಾಶಂಕರ ಮಠದ ದತ್ತಪ್ಪಯ್ಯ ಶ್ರೀಗಳು ಚಾಲನೆ ನೀಡುವವರು. ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಕಿರಣ ಪಾಟೀಲ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಸಿಪಿಐ ಎಚ್.ಎಂ ಪಾಟೀಲ, ಪಿಎಸ್ಐ ಎಚ್.ಎಸ್ ಹೊಸಮನಿ ಈ ವೇಳೆ ಭಾಗವಹಿಸುತ್ತಾರೆ ಎಂದರು.

ಸುಮಾರು 2 ಕಿಲೋ ಮೀಟರ್ ದೂರದ ಮ್ಯಾರಾಥಾನ್ ವೇಳೆ ಕೋವಿಡ್ 19 ಮಾರ್ಗಸೂಚಿಗಳನ್ನ ಪಾಲಿಸಲಾಗುವುದು. ಇದರಲ್ಲಿ ಭಾಗವಹಿಸುವವರಿಗೆ ಟೀ ಶರ್ಟ್ ನೀಡಲಾಗ್ತಿದ್ದು, ಮ್ಯಾರಾಥಾನ್ ನಲ್ಲಿ ಮೊದಲು ಬಂದ 15 ಜನರಿಗೆ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರ ಸಹಿಯುಳ್ಳ ಟೀ ಶರ್ಟ್ ನೀಡಲಾಗುವುದು ಎಂದಿರುವ ಅವರು, ಜನವರಿ 22ರ ಮಧ್ಯಾಹ್ನ 3 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಜಾದ್ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅಶೋಕ ನೆಗಿನಾಳ, ಯುವ ಬ್ರಿಗೇಡ್ ಆಲಮೇಲ ತಾಲೂಕು ಸಂಚಾಲಕ ಶಿವಮೂರ್ತಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!