ಪ್ರಮಾಣ ವಚನ ಬಿಟ್ಟು ಹಸೆಮಣೆ ಏರಿದ ಸಂಸದೆ

437

ನವದೆಹಲಿ: 17ನೇ ಲೋಕಸಭಾ ಎಲೆಕ್ಷನ್ ನಲ್ಲಿ ಮೊದಲ ಬಾರಿಗೆ ಭರ್ಜರಿಯಾಗಿ ಜಯಗಳಿಸಿದ ನಟಿ ನುಸ್ರುತ್ ಜಹಾನ್, ಟರ್ಕಿಯಲ್ಲಿ ಹಸೆಮಣೆ ಏರಿದ್ದಾರೆ. ಪಶ್ಚಿಮ ಬಂಗಾಳದ ಬಸೀರ್ಹತ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದಾರೆ.

ನೂತನ ಸಂಸದರು ಇಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ರೆ, ಅತ್ತ ನುಸ್ರುತ್ ಕೊಲ್ಕತ್ತಾ ಮೂಲದ ಉದ್ಯಮಿ ನಿಖಿಲ್ ಜೈನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಟರ್ಕಿಯ ಸುಂದರ ನಗರವಾದ ಬೋಡ್ರುಂನಲ್ಲಿ ವಿವಾಹ ಮಾಡಿಕೊಂಡಿದ್ದು, ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇನೋರ್ವ ಎಂಪಿ ಮಿಮಿ ಚಕ್ರವರ್ತಿ ಕೂಡಾ ನುಸ್ರುತ್ ಕೊಡ ಟರ್ಕಿಗೆ ತೆರಳಿದ್ದು, ಇವರೂ ಕೂಡಾ ಪ್ರಮಾಣ ವಚನ ಸ್ವೀಕರ ಮಾಡುವುದು ಬಾಕಿ ಇದೆ.


TAG


Leave a Reply

Your email address will not be published. Required fields are marked *

error: Content is protected !!