ನ್ಯೂಜಿಲೆಂಡ್ ಸೆಮಿ ಫೈನಲ್ ಎಂಟ್ರಿ

153

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವರ್ಲ್ಡ್ ಕಪ್ ನಲ್ಲಿ ಶುಕ್ರವಾರ ನಡೆದ ನ್ಯೂಜಿಲೆಂಡ್ ಹಾಗೂ ಐರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಪಡೆ ಗಲುವು ಸಾಧಿಸಿ, ಸೆಮಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಟಾಸ್ ಗೆದ್ದ ಐರ್ಲ್ಯಾಂಡ್ ನಾಯಕ ಆಂಡ್ರೋ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್ ಭರ್ಜರಿ 61 ರನ್ ನಿಂದಾಗಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಅಲೆನ್ 32, ಕಾನ್ವೆ 28, ಪಿಲಪ್ಸ್ 17, ಮಿಚಲ್ 31, ನಿಶಾಮ್ 0, ಸೆಂಟ್ನರ್ 0, ಸೌಥಿ ಅಜೇಯ 1 ರನ್ ಗಳಿಸಿದರು. ಐರ್ಲ್ಯಾಂಡ್ ಪರ ಲಿಟಲ್ 3 ವಿಕೆಟ್ ಪಡೆದು ಮಿಂಚಿದರು. ಗ್ರೀತ್ 2,  ಆಡಿರ್ 1 ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಐರ್ಲ್ಯಾಂಡ್ 9 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ 35 ರನ್ ಗಳ ಅಂತರದಿಂದ ಸೋಲು ಅನುಭವಿಸಿತು. ಪೌಲ್ 37, ಆಂಡ್ರೊ 30, ಡೊಕ್ರೆಲ್ 23 ರನ್ ಗಳಿಸಿದ್ದೆ ಗರಿಷ್ಟ ರನ್ ಗಳಾಗಿವೆ. ನ್ಯೂಜಿಲೆಂಡ್ ಪರ ಫರ್ಗೂಸನ್ 3 ವಿಕೆಟ್ ಪಡೆದರೆ, ಸೌಥಿ, ಸೂಧಿ, ಸಾಂಟ್ನರ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಅತ್ತ ಆಸ್ಟ್ರೇಲಿಯಾ ಅಫ್ಗನ್ ವಿರುದ್ಧ 4 ರನ್ ಗಳ ರೋಚಕ ಗೆಲುವು ಸಾಧಿಸಿತು. ಆದರೆ, ರೇನ್ ರೇಟ್ ಆಧಾರದ ಮೇಲೆ 2ನೇ ಸ್ಥಾನದಲ್ಲಿದೆ. ಹೀಗಾಗಿ ನ್ಯೂಜಿಲೆಂಡ್ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಸ್ಕೋರ್ ಬೆನ್ನು ಹತ್ತಿದ ಅಫ್ಗನ್ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಕೇವಲ 4 ರನ್ ಗಳಿಂದು ಸೋಲು ಅನುಭವಿಸಿತು.




Leave a Reply

Your email address will not be published. Required fields are marked *

error: Content is protected !!