ಮುಗಿಯದ ಸಿಎಂ ಸ್ಥಾನದ ಜಿದ್ದಾಜಿದ್ದಿ.. ಮುಂದಿದೆ ಮಂತ್ರಿಗಿರಿ ಫೈಟ್

131

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದು ಇದುವರೆಗೂ ಅಂತಿಮವಾಗಿಲ್ಲ. ಮೇ 13ಕ್ಕೆ ಫಲಿತಾಂಶ ಬಂದ ದಿನದಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಚುನಾವಣೆಯಲ್ಲಿ ಜೋಡೆತ್ತುಗಳಂತೆ ಕೆಲಸ ಮಾಡಿದವರು. ಫಲಿತಾಂಶ ಬರುತ್ತಿದ್ದಂತೆ ನಾನೊಂದು ತೀರ ನೀನೊಂದು ತೀರ ಆಗಿದ್ದಾರೆ.

ದೆಹಲಿಯಲ್ಲಿ ರಾಷ್ಟ್ರೀಯ ನಾಯಕರೊಂದಿಗೆ ಸಭೆಯ ಮೇಲೆ ಸಭೆ ನಡೆಸಲಾಗುತ್ತಿದೆ. ಆದರೂ ಇಬ್ಬರು ನಾಯಕರು ಯಾವುದೇ ಆಫರ್ ಗಳಿಗೆ, ಮನವಿಗಳಿಗೆ, ಸಲಹೆಗಳಿಗೆ ಒಪ್ಪಿಕೊಳ್ಳುತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದ್ದಾರೆ. ಇದರ ಜೊತೆಗೆ ಎಂ.ಬಿ ಪಾಟೀಲ(ಲಿಂಗಾಯತ), ಡಾ.ಜಿ ಪರಮೇಶ್ವರ(ದಲಿತ) ಹಾಗೂ ಯು.ಟಿ ಖಾದರ್(ಮುಸ್ಲಿಂ) ಇವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಅನ್ನೋ ಚರ್ಚೆಯಾಗಿದೆ. ಇದು ಅಂತಿಮವಾಗಿಲ್ಲ.

ಸಿಎಂ ಹೆಸರು ಫೈನಲ್ ಆದ್ಮೇಲೆ ಆಂತರಿಕ ಕಚ್ಚಾಟಗಳು ಶುರುವಾಗುವುದು ಪಕ್ಕಾ. ಈಗಾಗ್ಲೇ ಸಿದ್ದರಾಮಯ್ಯ ಬಣ, ಡಿ.ಕೆ ಶಿವಕುಮಾರ್ ಬಣ ನಿರ್ಮಾಣವಾಗಿದೆ. ಇವರ ಸಚಿವ ಸ್ಥಾನಕ್ಕಾಗಿ ಲಾಬಿ ಒಂದ್ಕಡೆಯಾರೆ ಯಾವ ಸಚಿವ ಸ್ಥಾನ ಬೇಕು ಅನ್ನೋದು ಮತ್ತೊಂದ್ಕಡೆ. ಹೀಗಾಗಿ ಆಗ ಒಂದು ರೀತಿಯ ಫೈಟ್ ಆಗುವುದು ಸಹ ನೂರಕ್ಕೆ ನೂರರಷ್ಟು ಸತ್ಯ. ಆದರಿಂದ ಸಚಿವ ಸಂಪುಟ ಪೂರ್ತಿ ಮಾಡದೆ ಪ್ರಮುಖರಿಗೆ ಮಂತ್ರಿಗಿರಿ ಕೊಟ್ಟು, ಮುಂದೆ ಹೊಸಬರಿಗೆ ಅವಕಾಶ ಕಲ್ಪಿಸುವ ಪ್ಲಾನ್ ಮಾಡಬಹುದು. ಮಂತ್ರಿಗಿರಿ ತಪ್ಪಿದವರ ಮನಸ್ಸು ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಲಿದೆ.
Leave a Reply

Your email address will not be published. Required fields are marked *

error: Content is protected !!