ಜಮಾಲಿಗುಡ್ಡ ಚಿತ್ರದ ಪಾತ್ರಗಳು ರಿವೀಲ್

235

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾಲಿ ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಮ್ ಜಮಾಲಿಗುಡ್ಡ ಅನ್ನೋ ಚಿತ್ರದ ಪಾತ್ರಗಳನ್ನು ರಿವೀಲ್ ಮಾಡಲಾಗಿದೆ. ಚಿತ್ರದಲ್ಲಿ ಬಹುದೊಡ್ಡ ತಾರಾ ಬಳಗವಿದೆ. ಪ್ರತಿಯೊಬ್ಬರ ಗೆಟಪ್ ವಿಭಿನ್ನವಾಗಿದೆ.

ಹಿರೋಶಿಮಾ ಪಾತ್ರದಲ್ಲಿ ಧನಂಜಯ್, ನಾಗಾಸಾಕಿ ಪಾತ್ರದಲ್ಲಿ ಯಶ್ ಶೆಟ್ಟಿ, ರುಕ್ಮುಣಿಯಾಗಿ ಅದಿತಿ ಪ್ರಭುದೇವ್, ಪಾಯಲ್ ಆಗಿ ಭಾವನಾ ರಾಮಣ್ಣ, ಮೊಹಮ್ಮದ್ ಶಕೀಲ್ ಆಗಿ ಪ್ರಕಾಶ್ ಬೆಳವಾಡಿ, ಎಸ್.ಐ ರೂಪಾ ಪಾತ್ರದಲ್ಲಿ ಟಗರು ಚಿತ್ರದ ಕ್ಯಾನ್ಸ್ ಟೇಬಲ್ ಸರೋಜಾ ಖ್ಯಾತಿಯ ರಿಷಿಕಾ ರಾಜ್, ಬಾಳೇಗೌಡ ಪಾತ್ರದಲ್ಲಿ ನಂದ ಗೋಪಾಲ್, ಪುಟ್ಟಲಿಂಗ ಪಾತ್ರದಲ್ಲಿ ಕಾಮಿಡಿ ನಟ ತುಕಾಲಿ ಸಂತೋಷ್, ಚುಕ್ಕಿ ಪಾತ್ರದಲ್ಲಿ ಬಾಲ್ಯ ನಟಿ ಪ್ರಾಣ್ಯ ಪಿ.ರಾವ್ ಕಾಣಿಸಿಕೊಂಡಿದ್ದಾರೆ.

ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ನಿರ್ದೇಶನ ಮಾಡಿರುವ ಕುಶಾಲ್ ಗೌಡ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ಯ ಸಂಗೀತ, ಮಾಸ್ತಿಯ ಡೈಲಾಗ್ ಈ ಚಿತ್ರಕ್ಕಿದೆ.




Leave a Reply

Your email address will not be published. Required fields are marked *

error: Content is protected !!