ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಆನ್ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ಮುಂಬೈನಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡ ವರದಿ ಆಗಿದೆ. ಇದು ಈಗಲೂ ಮುಂದುವರೆದಿದ್ದು, ಬಹುಭಾಷಾ ನಟಿ ನಗ್ಮಾ ಹಾಗೂ ರಾಜಕಾರಣಿ ಸಹ ಆನ್ಲೈನ್ ವಂಚಕರ ಬಲೆಗೆ ಸಿಲುಕಿ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ನಗ್ಮಾ ಅವರ ಮೊಬೈಲ್ ಗೆ ಬ್ಯಾಂಕಿನವರು ಕಳಿಸಿದಂತೆ ಲಿಂಕ್ ವೊಂದು ಬಂದಿದೆ. ಅದನ್ನು ಕ್ಲಿಕ್ ಮಾಡಿದ್ದಾರೆ. ಆಗ ಅವರಿಗೆ ಫೋನ್ ಕಾಲ್ ಬಂದಿದೆ. ಬ್ಯಾಂಕ್ ಸಿಬ್ಬಂದಿ ಎಂದು ಹೇಳಿ ಕೆವೈಸಿ ಅಪ್ ಡೇಟ್ ಮಾಡುವಂತೆ ತಿಳಿಸಿದ್ದಾನೆ. ಆದರೆ, ನಗ್ಮಾ ತಮ್ಮ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಶೇರ್ ಮಾಡದ ಕಾರಣ ವಂಚಕ ಆನ್ಲೈನ್ ಅಕೌಂಟ್ ಗೆ ಲಾಗಿನ್ ಆಗಿ ಬೆನಿಫಿಷರ್ ಅಕೌಂಟ್ ಕ್ರಿಯೇಟ್ ಮಾಡಿ 1 ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದಾನೆ.
ವಂಚನ ಸಾಕಷ್ಟು ಸಾರಿ ಹಣ ವಂಚಿಸಲು ಪ್ರಯತ್ನಿಸಿದ್ದು ಒಟಿಪಿಗಳು ಸಾಕಷ್ಟು ಬಂದಿವೆ. ಇದೆ ರೀತಿ ಒಂದೇ ಬ್ಯಾಂಕಿನ ಸುಮಾರು 80 ಗ್ರಾಹಕರಿಗೆ ವಂಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಟಿ ನಗ್ಮಾ 90ರ ದಶಕದಲ್ಲಿ ನಟ ಶಿವರಾಜಕುಮಾರ್ ಜೊತೆಗೆ ಕುರುಬನ ರಾಣಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ರವಿಚಂದ್ರನ್ ಜೊತೆಗೆ ರವಿಮಾಮಾ, ವಿಷ್ಣುರ್ವಧನ್ ಜೊತೆಗೆ ಹೃದಯವಂತ ಚಿತ್ರಗಳಲ್ಲಿ ನಟಿಸಿದರು. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿ ನಗ್ಮಾ 9 ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.