ಆಸ್ಕರ್ ಕಾರ್ಯಕ್ರಮ ವೀಕ್ಷಿಸಲು RRR ಟೀಂ ಕೊಟ್ಟಿದ್ದು 1.44 ಕೋಟಿ!

45

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಭಾರತೀಯ ಕಾಲಮಾನದ ಪ್ರಕಾರ ಕಳೆದ ಸೋಮವಾರ ಆಸ್ಕರ್ ಅಕಾಡೆಮಿಯ 95ನೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಇದರಲ್ಲಿ ಭಾರತೀಯ ಚಿತ್ರರಂಗದ ಆರ್ ಆರ್ ಆರ್ ಚಿತ್ರ ಹಾಗೂ ಸಾಕ್ಷ್ಯಚಿತ್ರವೊಂದು ಪ್ರಶಸ್ತಿ ಪಡೆದಿವೆ. ಈ ಕಾರ್ಯಕ್ರಮ ವೀಕ್ಷಿಸಲು ಆರ್ ಆರ್ ಆರ್ ಚಿತ್ರತಂಡ 1.44 ಕೋಟಿ ರೂಪಾಯಿ ಖರ್ಚು ಮಾಡಿದೆಯಂತೆ.

ಹೌದು ಆಸ್ಕರ್ ಗೆ ನಾಮಿನೇಟ್ ಆಗಿದ್ದು ನಾಟು ನಾಟು ಹಾಡು ಮಾತ್ರ. ಹೀಗಾಗಿ ಗೀತೆ ರಚನೆಕಾರ, ಸಂಗೀತ ಸಂಯೋಜಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಹೀಗಾಗಿ ಇದರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಕೀರವಾಣಿ ಹಾಗೂ ಚಂದ್ರಬೋಸ್ ಮಾತ್ರ ವೇದಿಕೆ ಮೇಲೆ ಹೋಗಿ ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ ಚಿತ್ರ ತಂಡ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದೆ.

ನಿರ್ದೇಶಕ ರಾಜಮೌಳಿ, ಪತ್ನಿ ರಮಾ, ನಟ ರಾಮಚರಣ್, ಪತ್ನಿ ಉಪಾಸನಾ, ನಟ ಜ್ಯೂ.ಎನ್ ಟಿಆರ್, ಪತ್ನಿ ಕಾರ್ತಿಕೇಯ ಇವರೆಲ್ಲ ಟಿಕೆಟ್ ಖರೀದಿಸಿ ಪ್ರೇಕ್ಷಕರ ಸೀಟಿನಲ್ಲಿ ಕುಳಿತಿದ್ದಾರೆ. ಇದಕ್ಕಾಗಿ 1.44 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಕಾರಣಕ್ಕೆ ನಟರು ಹಾಗೂ ನಿರ್ದೇಶಕ ಯಾರು ವೇದಿಕೆ ಮೇಲೆ ಏರಲು ಅವಕಾಶವಿಲ್ಲ. ಮತ್ತೆ ಪ್ರಶಸ್ತಿ ಗೆದ್ದ ಹಾಡಿನ ನೃತ್ಯವನ್ನು ನಟರು ಸಹ ಮಾಡಿಲ್ಲ. ಆಸ್ಕರ್ ಅಕಾಡೆಮಿ ನಿಯಮದ ಪ್ರಕಾರ ಯಾವ ವಿಭಾಗದಿಂದ ನಾಮಿನೇಟ್ ಆಗಿರುತ್ತೋ ಅದಕ್ಕೆ ಸಂಬಂಧಿಸಿದವರಿಗೆ ಮಾತ್ರ ಆಹ್ವಾನ. ಉಳಿದವರು ಟಿಕೆಟ್ ಖರೀದಿಸಬೇಕು.
Leave a Reply

Your email address will not be published. Required fields are marked *

error: Content is protected !!