ಪಠಾಣ್ ಟ್ರೇಲರ್.. ದೇಶ ಪ್ರೇಮಿಯ ಕಥೆಯೊಂದಿಗೆ ಎಸ್ಆರ್ ಕೆ

154

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಶಾರುಖ್ ಖಾನ್, ದೀಪಾಕಾ ಪಡುಕೋಣೆ, ಜಾನ್ ಅಬ್ರಾಹಂ ಲೀಡ್ ರೋಲ್ ನಲ್ಲಿರುವ ಪಠಾಣ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಭಯೋತ್ಪಾದಕ ಸಂಘಟನೆಯೊಂದು ಭಾರತದ ಮೇಲೆ ದಾಳಿ ನಡೆಸಲು ಪ್ಲಾನ್ ಮಾಡಿದಾಗ ಅವರ ವಿರುದ್ಧ ಹೀರೋ ಹೋರಾಡುವ ಕಥಾಹಂದರವನ್ನು ಪಠಾಣ್ ಹೊಂದಿದೆ.

ಪಠಾಣ್ ಅಸಲಿಗೆ ಯಾರು? ಆತ ದೇಶ ಬಿಟ್ಟು ಎಲ್ಲಿಗೆ ಹೋಗಿರುತ್ತಾನೆ? ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ಪಠಾಣ್ ನನ್ನು ಸರ್ಕಾರ ಯಾಕೆ ನೇಮಕ ಮಾಡುತ್ತೆ ಅನ್ನೋ ಕುತೂಹಲಕ್ಕೆ ಸಿನಿಮಾ ನೋಡಬೇಕು. ನಟ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಆಕ್ಷನ್ ನೋಡುಗರ ಎದೆ ಝಲ್ ಎನಿಸುವಂತಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದ ಬೇಸರಮ್ ರಂಗ್ ಹಾಡನ್ನು ವಿವಾದ ಮಾಡಲಾಯಿತು. ಈ ಮೂಲಕ ಸಿನಿಮಾ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಇದೆಲ್ಲವನ್ನು ಮೆಟ್ಟು ನಿಲ್ಲುವಂತೆ ಟ್ರೇಲರ್ ಮೂಡಿ ಬಂದಿದೆ. ಜನವರಿ 25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಹಿಂದಿ ಜೊತೆಗೆ ತಮಿಳು, ತೆಲುಗಿನಲ್ಲಿ ಪಠಾಣ್ ರೆಡಿಯಾಗಿದೆ.




Leave a Reply

Your email address will not be published. Required fields are marked *

error: Content is protected !!