ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮುಂಬೈ: ಬಾಲಿವುಡ್ ನಟಿ ಪಾಯಲ್ ಘೋಷ್ ಸೋಷಿಯಲ್ ಮೀಡಿಯಾದಲ್ಲಿ ಡೆತ್ ನೋಟ್ ಹಂಚಿಕೊಂಡಿದ್ದು, ಎಲ್ಲರಲ್ಲಿಯೂ ಆತಂಕ ಮೂಡಿದೆ. ನಾನು ಪಾಯಲ್ ಘೋಷ್, ನಾನು ಆತ್ಮಹತ್ಯೆ ಅಥವ ಹೃದಯಾಘಾತದಿಂದ ಮೃತಪಟ್ಟರೆ ಅದಕ್ಕೆ ಕಾರಣರಾದವರು …. ಎಂದು ಬರೆದಿದ್ದಾರೆ.
ಈ ರೀತಿಯಾಗಿ ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಸೇರಿ ಅನೇಕರು ಕಾಮೆಂಟ್ಸ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ. ನಟಿ ಪಾಯಲ್ ಹಿಂದಿ ಅಲ್ಲದೆ ಕನ್ನಡ, ತೆಲುಗು, ಇಂಗ್ಲಿಷ್ ಚಿತ್ರಗಳಲ್ಲಿಯೂ ನಟಿಸಿದ್ದಾಳೆ.
ಎರಡು ದಿನಗಳ ಹಿಂದೆಯಷ್ಟೇ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ್ದಾಳೆ. ಕಳೆದ ವರ್ಷ ಮುಸುಕುಧಾರಿ ಗುಂಪೊಂದು ನನ್ನ ಮೇಲೆ ಹಲ್ಲೆ ಮಾಡಿ ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿತ್ತು ಎಂದು ಹೇಳಿದ್ದಳು. ಈಗ ನೋಡಿದರೆ ಡೆತ್ ನೋಟ್ ವೈರಲ್ ಆಗಿದ್ದು, ಎಲ್ಲರಲ್ಲಿಯೂ ಆತಂಕ ಮೂಡಿಸಿದೆ.